ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತಿ ಎಸ್.ಎಲ್ ಭೈರಪ್ಪನವರು ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಮರಿಸಿದ್ದಾರೆ. 126ನೇ ಸಂಚಿಕೆಯ ಮನದ ಮಾತು ಕಾರ್ಯಕ್ರಮದಲ್ಲಿ ನೆನೆದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ನಾನು ಮತ್ತು ನನ್ನ ದೇಶ ಮಹಾನ್ ವಿಚಾರವಾದಿ, ಮಹಾನ್ ಚಿಂತಕರೊಬ್ಬರನ್ನ ಕಳೆದುಕೊಂಡಿದೆ. ನಾನು ಅವರ ಜೊತೆ ವ್ಯಕ್ತಿಗತ ಸಂಪರ್ಕ ಇಟ್ಟುಕೊಂಡಿದ್ದೆ. ಹಲವು ಸಂದರ್ಭಗಳಲ್ಲಿ ಹಲವು ವಿಚಾರಗಳ ಮಂಥನ ನಡೆಸಿದ್ದೇವೆ. ಅವರ ಕೃತಿಗಳು ಯುವ ಪೀಳಿಗೆಗೆ ದಾರಿದೀಪ. ಅವರ ಅನೇಕ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿವೆ. ನಮ್ಮ ಮೂಲ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು, ಗೌರವ ತೋರಿಸಬೇಕು ಎಂಬುದನ್ನ ಅವರು ನಮಗೆ ಕಲಿಸಿಕೊಟ್ಟಿದ್ದಾರೆ. ಅವರ ಅಗಲಿಕೆಗೆ ನಾನು ಭಾವುಕ ವಿದಾಯ ತಿಳಿಸುತ್ತೇನೆ ಎಂದರು. ಭೈರಪ್ಪ ಅವರ ಜೊತೆಗಿನ ಒಡನಾಟ ಪ್ರೇರಣಾದಾಯಕ, ಅವರ ಪುಸ್ತಕಗಳು ಯುವಕರಿಗೆ ಪ್ರೇರಣೆ, ಅವ್ರ ಕೃತಿಗಳನ್ನ ಯುವಕರು ಹೆಚ್ಚು ಹೆಚ್ಚು ಓದಬೇಕು ಎಂದು ಪ್ರಧಾನಿ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa