ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ : ಭಾರತದ ಕಿರೀಟಕ್ಕೆ ಮತ್ತೊಂದು ಗರಿ
ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜೂನಿಯರ್ ಏಷ್ಯನ್ ಚಾಂಪಿಯನ್ ಅನುಷ್ಕಾ ಥೋಕೂರ್ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ರೈಫಲ್/ಪಿಸ್ತೂಲ್/ಶಾಟ್ಗನ್ – 2025ರಲ್ಲಿ ತನ್ನ ಅಸಾಧಾರಣ ಸಾಧನೆಯನ್ನು ಮುಂದುವರೆಸಿದ್ದಾರೆ. ಅವರು 50 ಮೀಟರ್ ರೈಫಲ್ ತ್ರೀ ಪೊಸಿಷನ್ ಜೂನಿಯರ್ ಮಹಿಳಾ ವಿಭಾಗದಲ್ಲಿ ಚಿ
Shooting


ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜೂನಿಯರ್ ಏಷ್ಯನ್ ಚಾಂಪಿಯನ್ ಅನುಷ್ಕಾ ಥೋಕೂರ್ ಐಎಸ್‌ಎಸ್‌ಎಫ್ ಜೂನಿಯರ್ ವಿಶ್ವಕಪ್ ರೈಫಲ್/ಪಿಸ್ತೂಲ್/ಶಾಟ್ಗನ್ – 2025ರಲ್ಲಿ ತನ್ನ ಅಸಾಧಾರಣ ಸಾಧನೆಯನ್ನು ಮುಂದುವರೆಸಿದ್ದಾರೆ. ಅವರು 50 ಮೀಟರ್ ರೈಫಲ್ ತ್ರೀ ಪೊಸಿಷನ್ ಜೂನಿಯರ್ ಮಹಿಳಾ ವಿಭಾಗದಲ್ಲಿ ಚಿನ್ನ ಗೆದ್ದು, ಈ ಸ್ಪರ್ಧೆಯಲ್ಲಿ ತಮ್ಮ ಎರಡನೇ ಚಿನ್ನದ ಪದಕವನ್ನು ಕೈಸೇರಿಸಿಕೊಂಡರು. ಮೊದಲ ದಿನ ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಅವರು ಚಿನ್ನ ಗೆದ್ದಿದ್ದರು.

ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಫೈನಲ್‌ನಲ್ಲಿ ಅನುಷ್ಕಾ 461.0 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರು. ಅವರ 35ನೇ ಶಾಟ್‌ನಲ್ಲಿ ಬಂದ ಪರಿಪೂರ್ಣ 10.9 ಅಂಕಗಳು ಪ್ರೇಕ್ಷಕರ ಮನಸೆಳೆಯಿತು. ಅರ್ಹತಾ ಹಂತದಲ್ಲೇ ಅವರು 585-31x ಅಂಕಗಳೊಂದಿಗೆ ಸ್ಪಷ್ಟ ಮುನ್ನಡೆ ಸಾಧಿಸಿದ್ದರು.

ಈ ಸ್ಪರ್ಧೆಯಲ್ಲಿ ಎಐಎನ್ ನ ಅನಸ್ತಾಸಿಯಾ ಸೊರೊಕಿನಾ (454.9) ಬೆಳ್ಳಿ, ಮಾರಿಯಾ ಕ್ರುಗ್ಲೋವಾ (444.0) ಕಂಚು ಗೆದ್ದರು. ಭಾರತದ ಮಹೀತ್ ಸಂಧು (422.7) ಐದನೇ, ಪ್ರಾಚಿ ಗಾಯಕ್ವಾಡ್ (399.3) ಏಳನೇ ಸ್ಥಾನ ಪಡೆದರು.

ಪುರುಷರ 50 ಮೀ ರೈಫಲ್ ತ್ರೀ ಪೊಸಿಷನ್ ಫೈನಲ್

ಚಿನ್ನ: ಡಿಮಿಟ್ರಿ ಪಿಮೆನೋವ್ (ಎಐಎನ್) – 461.0 ಅಂಕ

ಬೆಳ್ಳಿ: ಆಡ್ರಿಯನ್ ಕರ್ಮಾಕರ್ (ಭಾರತ) – 455.9 ಅಂಕ

ಕಂಚು: ಕಾಮಿಲ್ ನುರಿಯಾಖ್ಮೆಟೋವ್ (AIN) – 441.0 ಅಂಕ

ಭಾರತದ ವೇದಾಂತ್ ನಿತಿನ್ ವಾಘ್ಮಾರೆ (420.9) ಐದನೇ, ಸಮಿ ಉಲ್ಲಾ ಖಾನ್ (393.0) ಏಳನೇ ಸ್ಥಾನ ಪಡೆದರು.

25 ಮೀ. ರಾಪಿಡ್ ಫೈರ್ ಪಿಸ್ತೂಲ್ (ಹಂತ–1 ಅರ್ಹತೆ)

ಭಾರತೀಯ ಶೂಟರ್‌ಗಳು ತಮ್ಮ ಪ್ರಾಬಲ್ಯವನ್ನು ತೋರಿದರು.

ಸೂರಜ್ ಶರ್ಮಾ (287-7x) ಅಗ್ರ ಸ್ಥಾನದಲ್ಲಿ ಎಐಎನ್ ನ ಅಲೆಕ್ಸಾಂಡರ್ ಕೊವಾಲೆವ್ ಜೊತೆ ಸಮಬಲ ಸಾಧಿಸಿದರು.

ಸಮೀರ್ ಗುಲಿಯಾ (286-9x), ಅಭಿನವ್ ಚೌಧರಿ (284-8x), ಮುಖೇಶ್ ನೆಲವಲ್ಲಿ (283-10x), ಜತಿನ್ (282-5x) ಮುಂದಿನ ಸ್ಥಾನಗಳಲ್ಲಿದ್ದಾರೆ.

ಮಹಿಳೆಯರಲ್ಲಿ ಮೆಲ್ವಿನಾ ಏಂಜೆಲಿನ್ ಜೋಯಲ್ ಗ್ಲಾಡ್ಸನ್ (572-19x) ಒಂಬತ್ತನೇ, ಆಧ್ಯಾ ಅಗರ್ವಾಲ್ (563-12x) ಹನ್ನೆರಡನೇ ಸ್ಥಾನ ಪಡೆದರು.

ಒಟ್ಟಾರೆ ಭಾರತ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಆಧಿಪತ್ಯವನ್ನು ಮುಂದುವರೆಸಿದ್ದು, ಯುವ ಶೂಟರ್‌ಗಳ ಸಾಧನೆ ದೇಶದ ಕ್ರೀಡಾ ಭವಿಷ್ಯವನ್ನು ಬೆಳಗಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande