ಅಕ್ಕಿ ಕದ್ದು ನಂಜೇಗೌಡರಿಂದ ಅಕ್ಕಿ ಮನೆ ನಿರ್ಮಾಣ : ಮಾಜಿ ಶಾಸಕ ಮಂಜುನಾಥಗೌಡ ಲೇವಡಿ
ಕೂಲಿಗಾಗಿ ಕಾಳು ಯೋಜನೆಯಲ್ಲಿ ಅಕ್ಕಿ ಕದ್ದು ಕೊಮ್ಮನಹಳ್ಳಿಯಲ್ಲಿ ನಂಜೇಗೌಡರಿಂದ ಅಕ್ಕಿ ಮನೆ ನಿರ್ಮಾಣ: ಮಾಜಿ ಶಾಸಕ ಮಂಜುನಾಥಗೌಡ ಲೇವಡಿ
ಚಿತ್ರ: ಮಾಲೂರಿನಲ್ಲಿ ಮಾಜಿ ಶಾಸಕ ಮಂಜುನಾಥಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಕೋಲಾರ, ೨೭ ಸೆಪ್ಟಂಬರ್ (ಹಿ.ಸ.) :

ಆ್ಯಂಕರ್ : ಮಾಲೂರು ಶಾಸಕ ನಂಜೇ ಗೌಡರು ಗ್ರಾಮಪಂಚಾಯಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಮತಕಳ್ಳತನ ಮಾಡಿದ್ದರು.ಮತದಾನದ ಹಿಂದಿನ ದಿನವೇ ಎಪ್ಪತ್ತು ಮತಪತ್ರಗಳನ್ನು ಕದ್ದು ಮನೆಯಲ್ಲಿ ಇಟ್ಟುಕೊಂಡಿದ್ದರು. ಅವರು ಗ್ರಾಮಪಂಚಾಯಿತಿ ಸದಸ್ಯರಾಗಿದ್ದ ಅವಧಿಯಲ್ಲೇ ಮತಗಳನ್ನು ಕದ್ದಿದ್ದರು. ಮೊನ್ನೆ ಬಿಹಾರದಲ್ಲೂ ರಾಹುಲ್ ಗಾಂಧಿಯವರು ಮಾಲೂರಿನಲ್ಲಿ ವೋಟ್ ಚೋರಿ ಆಗಿದೆ ಎಂದು ಹೇಳಿದರಂತೆ. ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾಗಲೇ ಚುನಾವಣಾ ಅಕ್ರಮಗಳನ್ನು ನಡೆಸಿದ್ದರು ಎಂದು ಮಾಜಿ ಶಾಸಕ ಮಂಜುನಾಥ ಗೌಡ ಆರೋಪಿಸಿದರು.

ಮಾಲೂರಿನಲ್ಲಿ ಮಾಧ್ಯಮ ಘೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಗೌಡರು ಶಾಸಕ ನಂಜೇ ಗೌಡರ ವಿರುಧ್ಧ ವಾಗ್ದಾಳಿ ನಡೆಸಿದರು.

ನನ್ನನ್ನು ನಂಜೇ ಗೌಡರು ಕಳ್ಳ ಎಂದು ಕರೆದಿದ್ದಾರ. ಆದರೆ ಅವರು ರಾಜಕೀಯ ಬದುಕಿನ ಉದ್ದಕ್ಕೂ ಕಳ್ಳತನ ಮಾಡುತ್ತ ಬಂದಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಆ ಕಾಲದಲ್ಲೇ ಅಕ್ಕಿ ಕದ್ದಿದ್ದರು. ಕೂಲಿಗಾಗಿ ಕಾಳು ಯೋಜನೆಯಲ್ಲಿ ಅಕ್ಕಿ ಕದ್ದು ಕೊಮ್ಮನಹಳ್ಳಿಯಲ್ಲಿ ಮನೆಕಟ್ಟಿದ್ದರು. ಈಗಲೂ ಹಳಬರು ಕೊಮ್ಮನಹಳ್ಳಿಯ ಮನೆಯನ್ನು ಅಕ್ಕಿ ಮನೆ ಎಂದು ಕರೆಯುತ್ತಾರೆ.ಕೂಲಿಗಾಗಿ ಕಾಳು ಯೋಜನೆಯಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆದು ಹಣ ಮಾಡಿದ್ದರು. ಕೋತಿ ತಿಂದು ಮೇಕೆ ಮೂತಿಗೆ ಒರೆಸಿದಂತೆ ತಾಲ್ಲೂಕು ಪಂಚಾಯಿತಿ ಹದಿನಾಲ್ಕು ಮಂದಿ ನೌಕರರು ಅಮಾನತ್ತುಗೊಂಡಿದ್ದರು.ಒಬ್ಬರು ಆತ್ಮಹತ್ತೆ ಮಾಡಿಕೊಂಡಿದ್ದರು ಎಂದು ಹಳೇಪ್ರಕರಣವನ್ನು ಮಂಜುನಾಥ ಗೌಡರು ಕೆದಕಿದರು.

ನಂಜೇಗೌಡರು ಕೇವಲ ಅಕ್ಕಿ ಕಳ್ಳ ಅಲ್ಲ.ಹಾಲು ಕಳ್ಳ ಆಗಿದ್ಧಾನೆ.ಮಹಿಳೆಯರು ಕಷ್ಟಪಟ್ಟು ದುಡಿದು ಹಾಲು ಸರಬರಾಜು ಮಾಡುತ್ತಾರೆ. ಆದರೆ ನಂಜೇ ಗೌಡರು ಅಲ್ಲೂ ಲೂಟಿ ಮಾಡಿದ್ದಾರೆ.ಅಲ್ಲದೇ ಭೂಮಿ ಕಳ್ಳತನ ಮಾಢಿದ್ಧಾರೆ. ಭೂಮಂಜೂರಾತಿ ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಕ್ರಮವಾಗಿ ನೂರ ಇಪ್ಪತ್ತು ಎಕರೆ ತಮ್ಮ ನೆಂಟರ ಹೆಸರಿನಲ್ಲಿ ಮಂಜೂರು ಮಾಡಿದ್ದರು.

ಆದರೆ ಇ.ಡಿಯವರ ಬಳಿ ತಗಲಾಕುಕೊಂಡು ಜಮೀನು ವಾಪಸ್ ಮಾಡಿದ್ದರು.ನನ್ನನ್ನು ಕಳ್ಳ ಎಂದು ಕರೆಯುವ ನಂಜೇಗೌಡರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನೆ ಮಾಡಿದರು. ನನ್ನನ್ನು ರೌಡಿ ಎಂದು ನಂಜೇಗೌಡರು ಕರೆದಿದ್ಧಾರೆ. ನನ್ನ ವಿರುಧ್ಧ ಶೂಟ್ ಓಟ್ ಆರ್ಡರ್ ಇದ್ದಿದ್ದು ನಿಜ. ೨೫ ವರ್ಷಗಳ ಹಿಂದೆ ತಿಳಿಯದೇ ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿದ್ದೆ. ೨೫ ವರ್ಷಗಳ ಹಿಂದೆ ನಾವು ಕ್ರಿಕೆಟ್ ಆಡುತ್ತಿದ್ದೆವು. ನಮ್ಮಲ್ಲಿ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಇದ್ದ ಐವರು ಆಟವಾಡುತ್ತಿದ್ದರು. ಅವರನ್ನು ಹಿಡಿಯಲು ಪೊಲೀಸರು ಮಪ್ತಿಯಲ್ಲಿ ಬಂದಿದ್ದರು. ನಾವು ಅವರ ಮೇಲೆ ಹಲ್ಲೆ ನಡೆಸಿದ್ದೆವು. ಒಂದು ವಾರದ ನಂತರ ನಮ್ಮ ತಂದೆ ಸೊಣ್ಣಪ್ಪನವರು ಅಲ್ಲಿದ್ದ ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿದರು. ಒಂದು ವಾರದ ನಂತರ ಪೊಲೀಸರು ಎಫ್‌ಐಆರ್ ಹಾಕಿದ್ದರು.

ಎಫ್‌ಐಆರ್‌ನಲ್ಲಿ ಸೊಣ್ಣಪ್ಪನ ಮಗ ಎಂದು ನಮೂದಿಸಲಾಗಿತ್ತು. ಆಗ ನನ್ನು ಮಂಜುನಾಥಗೌಡ ಅಥವಾ ಮಂಜಣ್ಣ ಎಂದು ಕರೆಯುತ್ತಿರಲಿಲ್ಲ. ಆ ನಂತರ ನ್ಯಾಯಾಲದಲ್ಲಿ ಕೇಸ್ ಖುಲಾಸೆ ಆಯಿತು. ನಾನು ಹೊಸಕೋಟೆ ತಾಲ್ಲೂಕಿನ ಕೋಡಿಯಹಳ್ಳಿಯಲ್ಲಿ ಜಮೀನು ಕಬಳಿಕೆ ಮಾಡಿರುವುದಾಗಿ ಹೇಳಿದ್ದಾರೆ. ನಮ್ಮ ಕುಟುಂಬ ಗ್ರಾಮ ಠಾಣದಲ್ಲಿ ಕೇವಲ ಏದು ಗುಂಟೆ ಜಮೀನು ಹೊಂದಿದೆ. ನಾನು ನಿಧಿಗಾಗಿ ದೇವಾಲಯವನ್ನು ಕೆಡುವಿರುದಾಗಿ ನಂಜೇಗೌಡರು ಹೇಳಿದ್ದಾರೆ.

ಹೌದು ಹಳೇ ದೇವಾಲಯವನ್ನು ಕೆಡವಿ ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಿದ್ದೇವೆ. ನಂಜೇಗೌಡರಿಗೂ ಆಹ್ವಾನ ನೀಡುತ್ತೇವೆ ಅವರು ಬಂದು ನೋಡಲಿ ಎಂದರು. ನಾನು ಭ್ರಷ್ಟನಲ್ಲ ಎನ್ನುವ ನಂಜೇಗೌಡರು ಯಾರಿಂದಲೂ ಕಾಸು ತೆಗೆದುಕೊಳ್ಳುವಿದಿಲ್ಲ ಎಂದಿದ್ದಾರೆ. ಹಾಗಾದರೆ ತಾಲ್ಲುಕು ಕಛೇರಿಗೆ ತೆರಳಿ ಯಾರು ಕಾಸು ಕೊಡಬೇಡಿ .ನಂಜೇ ಗೌಡರು ಹೇಳಿದ್ದಾರೆ.

ಕಾಸು ಇಲ್ಲದೆ ಕೆಲಸ ಮಾಡಿ ಎಂದು ಕೇಳಿ ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.ನಂಜೇ ಗೌಡರು ಹೇಳಿದಂತೆ ಅಧಿಕಾರಿಗಳು ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂಜೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ, ನಂಜೇಗೌಡರ ಬಗ್ಗೆ ಮಾತನಾಡಿದ್ದೇನೆ. ಅವರ ಪತ್ನಿ ರತ್ನಮ್ಮ ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಅವರು ಮಾಡಿದ ಪೂಜೆಯಿಂದಲೇ ನಂಜೇಗೌಡರು ಇಂದು ಉಳಿದುಕೊಂಡಿದ್ದಾರೆ.

ಒಂದು ತಿಂಗಳೋ ಅಥವಾ ಎರಡೂವರೆ ವರ್ಷದಲ್ಲಿ ನಂಜೇಗೌಡರು ಮಾಜಿ ಶಾಸಕರು ಆಗಲಿದ್ದಾರೆ. ಟೇಕಲ್ ಹೋಬಳಿಯಲ್ಲಿ ೯ ಎಕರೆ ಅಕ್ರಮವಾಗಿ ಮಂಜೂರಾತಿ ಮಾಡಿಸಿಕೊಂಡು ಜಲ್ಲಿ ಕ್ರಷರ್‌ಗಳನ್ನು ನಡೆಸುತ್ತಿದ್ದಾರೆ. ಜಲ್ಲಿ ಕ್ರಷರ್‌ಗಳು ಅವರ ಕುಟುಂಬದ ಬೇರೆ ಬೇರೆ ಹೆಸರಿನಲ್ಲಿ ಇವೆ. ಸರ್ಕಾರಕ್ಕೆ ಸುಮಾರು ೧೦೯ ಕೋಟಿ ರಾಜಧನ ಪಾವತಿ ಮಾಡಬೇಕಾಗಿದೆ. ಮಾಜಿ ಶಾಸಕರಾಗದರೆ ಅವರು ಜೈಲಿಗೆ ಹೋಗುವುದು ಖಚಿತ ಎಂದು ಮಂಜುನಾಥಗೌಡ ತಿಳಿಸಿದರು.

ಚಿತ್ರ : ಮಾಲೂರಿನಲ್ಲಿ ಮಾಜಿ ಶಾಸಕ ಮಂಜುನಾಥಗೌಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande