ವಿಜಯಪುರ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟೀನ್, ಮಯನ್ಮಾರ್ ರಾಷ್ಟçಪತಿ, ಅರ್ಮೇನಿಯಾ ಪ್ರಧಾನಿ, ಇತೋಫಿಯಾ ಪ್ರಧಾನಮಂತ್ರಿ, ಬೇಲಾರೂಸ್ ಪ್ರಧಾನಿ, ಸೇರಿದಂತೆ ಅನೇಕ ರಾಷ್ಟçಗಳ ಪ್ರಧಾನಮಂತ್ರಿಗಳು, ರಾಷ್ಟಾçಧ್ಯಕ್ಷರು, ಉಜ್ಬೇಕಿಸ್ತಾನ್, ಅರಬ್ ಗಣರಾಜ್ಯ, ಇರಾನ್, ಈಜಿಪ್ತö ಹಾಗೂನೈಜಿರೀಯಾ ಸೇರಿದಂತೆ ವಿವಿಧ ದೇಶಗಳ ವಿದೇಶಾಂಗ ಸಚಿವರು, ರಾಯಭಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಶಿಫಾ ಸಮರ್ಥವಾಗಿ ವಿಶ್ವ ಶಾಂತಿ ಕುರಿತಾದ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿ ವಿಶ್ವ ಶಾಂತಿಯ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟರು.
ಭಾರತೀಯ ಸಂಸ್ಕೃತಿ, ಸಹೋದರತೆಯ ಪ್ರತಿಬಿಂಬವಾಗಿರುವ `ವಸುಧೈವ ಕುಟುಂಬಕ0' (ಇಡೀ ಜಗತ್ತೇ ಒಂದು ಕುಟುಂಬ) ಎಂಬ ನೆಲೆಗಟ್ಟಿನ ಆಧರಿಸಿ ಸಮರ್ಥವಾಗಿ ತಮ್ಮ ವಿಚಾರಗಳನ್ನು ಮಂಡಿಸಿ ಇಡಿ ವಿಶ್ವದ ಯುವ ನಾಯಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವ ಅಣು ದಿನಾಚರಣೆ ಅಂಗವಾಗಿ ರಷ್ಯಾ ಸರ್ಕಾರ ತನ್ನ ರಾಜಧಾನಿಯಲ್ಲಿ ಆಯೋಜಿಸಿದ್ದ ವಿಶ್ವ ಯುವ ಶೃಂಗ ಸಭೆಯಲ್ಲಿ ಇಂಗ್ಲೆ0ಡ್, ಅಮೇರಿಕೆ, ಜರ್ಮನಿ, ಪ್ರಾನ್ಸ್ ಸೇರಿದಂತೆ ವಿವಿಧ ದೇಶಗಳಿಂದ ಸರಿಸುಮಾರು ೧೬೦ ಕ್ಕೂ ಅಧಿಕ ದೇಶದ ಯುವ ಪ್ರತಿನಿಧಿಗಳು ಈ ಅಂತಾರಾಷ್ಟಿçÃಯ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ಸಮಾವೇಶದಲ್ಲಿ ವಿಶ್ವಶಾಂತಿ ಹಾಗೂ ವಿಶ್ವ ಶಾಂತಿ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಾಗೂ ವಿಶ್ವ ಶಾಂತಿ ಸ್ಥಾಪಿಸುವಲ್ಲಿ ಭಾರತದ ದಿವ್ಯ ಹೆಜ್ಜೆಗಳ ಕುರಿತು ಸುದೀರ್ಘವಾಗಿ ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು.
ಇಂದು ದೇಶ-ದೇಶಗಳ ನಡುವೆ ದ್ವೇಷ ಭಾವನೆ ಬೆಳೆದು ಯುದ್ಧೋನ್ಮಾದ ಕಂಡು ಬರುತ್ತಿರುವುದು ವಿಶ್ವಶಾಂತಿಗೆ ಅಪಾಯದ ಸಂಗತಿ, ಈ ಎಲ್ಲ ಸಮಸ್ಯೆಗಳಿಗೆ ಶಾಂತಿ, ಸಹೋದರತೆಯೇ ಪರಿಹಾರವಾಗಿದೆ, ನಮ್ಮ ಭವ್ಯ ಭಾರತದ ಸಂಸ್ಕೃತಿ ವಿಶ್ವಶಾಂತಿಯ ಪ್ರತೀಕವೂ ಹೌದು, ಭಾರತೀಯ ಸಂಸ್ಕೃತಿ ಪ್ರತಿಪಾದಿಸುವ ವಸುದೈವ ಕುಟುಂಬ ಎನ್ನುವ ಉಕ್ತಿಯಲ್ಲಿಯೇ ಇಡೀ ಜಗತ್ತೇ ಒಂದು ಕುಟುಂಬ ಎಂಬ ಸಂದೇಶವನ್ನು ಭಾರತ ಸಾರಿದೆ. ಈ ತತ್ವ ಅನುಸರಿಸಿ ನಡೆದರೆ ಯಾವ ದ್ವೇಷವೂ ಇರುವುದಿಲ್ಲ, ಶಾಂತಿ ನಮ್ಮ ಮಂತ್ರವಾಗಬೇಕು, ನಮ್ಮ ಜೀವನ ಸೂತ್ರವಾಗಬೇಕು, ವಿಶ್ವ ಶಾಂತಿ ಸ್ಥಾಪಿಸುವಲ್ಲಿ ಯುವಜನತೆ ಮಹತ್ವದ ಪಾತ್ರ ನಿಭಾಯಿಸಬೇಕು, ದ್ವೇಷಭಾವ ಅಳಿಸುವ ಕಾರ್ಯದಲ್ಲಿ ಸಹಭಾಗಿತ್ವ ನೀಡಬೇಕು ಎಂದು ಶಿಫಾ ಕರೆ ನೀಡಿದ್ದಾರೆ.
ಇದೇ ಪ್ರಥಮ ಬಾರಿಗೆ ಜಾಗತಿಕ ಮಟ್ಟದ ಶೃಂಗ ಸಭೆಯಲ್ಲಿ ವಿಜಯಪುರ ಯುವ ಪ್ರತಿಭೆಯೊಬ್ಬರು ಭಾರತ ದೇಶವನ್ನು ಪ್ರತಿನಿಧಿಸಿದ್ದು ಇದೇ ಪ್ರಥಮ. ವಿಶ್ವ ಶಾಂತಿ ಇಂದಿನ ಅಗತ್ಯತೆ, ಶಾಂತಿ ಇಂದಿನ ಜೀವನ ಅಂಗವಾಗಬೇಕು, ನಮ್ಮ ಭಾರತ ದೇಶದ ಸಂಸ್ಕೃತಿಯ ಬೆಳಕಿನಲ್ಲಿ ವಿಶ್ವಶಾಂತಿಯ ಮಹತ್ವವನ್ನು ಸಾರಿದ್ದೇನೆ, ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಶಿಫಾ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande