ಬಳ್ಳಾರಿ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಪಂಚತಾರಾ ಹೋಟೆಲ್‍ನಲ್ಲಿ ಸಂಸದೀಯ ರಾಜಭಾಷಾ ಸಮಿತಿ ನಡೆಸುತ್ತಿದ್ದ ಹಿಂದಿ ಹೇರಿಕೆ ಸಮಾಲೋಚನಾ ಕಾರ್ಯಾಗಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ್ದ ದಾಳಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಲು ಆಗ್ರಹಿಸಿ ಕರವೆ ಜಿಲ್ಲಾ ಘಟಕ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿತು.
ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಅಂಗಡಿ ಶಂಕ್ರಪ್ಪ ಅವರು ಪ್ರತಿಭಟನೆಯ ನೇತೃತ್ವವಹಿಸಿ, ರಾಜಭಾಷಾ ಆಯೋಗ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುವ ಕುತಂತ್ರ ನಡೆಸುತ್ತಿದೆ. ಸರ್ಕಾರ ರಾಜಭಾಷಾ ಒಕ್ಕೂಟ ಸಮಿತಿಯನ್ನು ರದ್ದುಪಡಿಸಬೇಕು. ರಾಜಭಾಷೆಯ ಹೆಸರಲ್ಲಿ ಒತ್ತಾಯದಿಂದ ಹಿಂದಿ ಹೇರುವುದನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ಹೇರಿಕೆ ದೇಶಕ್ಕೆ ಮಾರಕ. ಭಾರತದ ಐಕ್ಯತೆಗೆ ಧಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮೇಲೆ ಹೂಡಲಾಗಿರುವ ಸುಳ್ಳು ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂದಕ್ಕೆ ಪಡೆದು, ಬಂಧಿತರನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಕರವೇ ಚಳವಳಿ ನಡೆಸುತ್ತದೆ ಎಂದು ಹೇಳಿದರು.
ಕೆ.ಎಂ.ಶಿವಕುಮಾರ್, ಎಸ್. ಆನಂದಗೌಡ, ತೆಕ್ಕಲಕೋಟೆ ಬಸವರಾಜ, ನಾಡನಗೌಡ ಚಂದ್ರಮೋಹನ್, ಹಡ್ಲಿಗಿ ಹನುಮನಗೌಡ, ಕುರುಗೋಡು ತಾಲ್ಲೂಕು ಅಧ್ಯಕ್ಷರಾದ ಗೆಣಿಕೆಹಾಳ್ ವಿರೇಶ್ ಮತ್ತು ಬಳ್ಳಾರಿ ತಾಲ್ಲೂಕು ಅಧ್ಯಕ್ಷರಾದ ದಿವಾಕರ್, ಮೋಕಾ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬಾಣಾಪುರ ಪೆಂಪನಗೌಡ, ಶಂಕರಬಂಡೆ ರಾಜೇಶ್, ಬಾವಿ ಶಿವಕುಮಾರ್ ಕುಡತಿನಿ, ಕಂಪ್ಲಿ ತಾಲ್ಲೂಕು ಅಧ್ಯಕ್ಷರಾದ ರಾಜಶೇಖರ್, ತಿಪ್ಪೇಶ್ ಬೆಳಗಲ್ಲು, ವಣೇನೂರು ಅಂಜಿ, ಶೇಖರ್, ತಿಮ್ಮಯ್ಯ, ಮೋಕಾ ಅಂಜಿನೇಯ್ಯ, ಎ.ಕೆ. ರಾಜು ಕೊಳಗಲ್ಲು, ಮಸ್ಕಿ ಮಹಾಂತೇಶ್, ಮಲ್ಲಿಕಾರ್ಜುನ ಚಾನಾಳ್, ಶಿವಕುಮಾರ್, ಪರಮೇಶ್ವರಸ್ವಾಮಿ, ಮಂಜುನಾಥ, ಪುರುಷೋತ್ತಮ, ಸಿದ್ದಪ್ಪ, ಮಾರುತಿ, ರಾಜಭಕ್ಷಿ, ಸಿದ್ದಿಸಾಬ್, ನಾಗರಾಜ, ಪ್ರಕಾಶ್ ಸಂಡೂರು ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್