ಎರಡನೇ ದಿನ ಗಳಿಕೆಯಲ್ಲಿ ಕುಸಿತ ಕಂಡ ಓಜಿ ಚಿತ್ರ
ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ “ದೆ ಕಾಲ್ ಹಿಮ್ ಓಜಿ” ಸಿನಿಮಾ ಸೆಪ್ಟೆಂಬರ್ 26ರಂದು ಭರ್ಜರಿ ಆರಂಭ ಕಂಡು, ಮೊದಲ ದಿನವೇ ₹63.75 ಕೋಟಿ ಗಳಿಸಿತು. ಆದರೆ ಎರಡನೇ ದಿನ ಗಳಿಕೆಯಲ್ಲಿ ಕುಸಿತ ಕಂಡಿದ್ದು ಕೇವಲ ₹19.25 ಕೋಟಿಗೆ ತಲುಪಿದೆ. ಪ್
Og


ಬೆಂಗಳೂರು, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ತೆಲುಗು ಸೂಪರ್‌ಸ್ಟಾರ್ ಪವನ್ ಕಲ್ಯಾಣ್ ಅಭಿನಯದ “ದೆ ಕಾಲ್ ಹಿಮ್ ಓಜಿ” ಸಿನಿಮಾ ಸೆಪ್ಟೆಂಬರ್ 26ರಂದು ಭರ್ಜರಿ ಆರಂಭ ಕಂಡು, ಮೊದಲ ದಿನವೇ ₹63.75 ಕೋಟಿ ಗಳಿಸಿತು. ಆದರೆ ಎರಡನೇ ದಿನ ಗಳಿಕೆಯಲ್ಲಿ ಕುಸಿತ ಕಂಡಿದ್ದು ಕೇವಲ ₹19.25 ಕೋಟಿಗೆ ತಲುಪಿದೆ. ಪ್ರೀ-ಸೇಲ್ ಸೇರಿ ಚಿತ್ರವು ಒಟ್ಟಾರೆ ಇದುವರೆಗೂ ಸುಮಾರು ₹104 ಕೋಟಿ ಗಳಿಸಿದೆ. ಇಮ್ರಾನ್ ಹಶ್ಮಿ ತೆಲುಗು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶಿಸಿದ್ದು, ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಆರಂಭಿಕ ಕುಸಿತದ ನಡುವೆಯೂ ಮುಂದಿನ ದಿನಗಳಲ್ಲಿ ಚಿತ್ರದ ಪ್ರದರ್ಶನ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande