ಗದಗ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಲೋಕಪಯೋಗಿ ಇಲಾಖೆಯ ಪ್ರಸ್ತಕ ಸಾಲಿನ ಅಂದಾಜು ಮೊತ್ತ 2 ಕೋಟಿಯಲ್ಲಿ ಗದಗ ತಾಲೂಕಿನ ಹುಬ್ಬಳ್ಳಿ ಚಿಂಚಲಿ ರಾ.ಹೇ. ಸಂರ್ಪಕಿಸುವ ರಸ್ತೆ ಮಾರ್ಗ, ಉಣಕಲ್, ಆನಂದ ನಗರ, ಗೋಪನಕೊಪ್ಪ ಕುಸಗಲ್ ಇಂಹಳಗಿ, ಸಿರಗುಪಿ, ಕೋಳಿವಾಡ, ಕಲ್ಲೂರು ರಾಷ್ಟಿಯ ಹೆದ್ದಾರಿ 205 ರಸ್ತೆ ಕಿ.ಮೀ 47.43 ರಿಂದ 52.02 ರವರೆಗೆ ಮರು ಡಾಂಬರಿಕರಣ ಮತ್ತು ತಾಲೂಕಿನ ಗಜೇಂದ್ರಗಡ ಸೊರಬ ರಸ್ತೆ ಕಿ.ಮೀ 122 ರಿಂದ 123 ವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.
ಗದಗ ತಾಲೂಕಿನ ಚಿಂಚಲಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಮಾತನಾಡಿದ ಅವರು ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಕಳಪೆ ಕಾಮಗಾರಿ ಆಗದಂತೆ ಲೋಕೋಪಯೋಗಿ ಇಲಾಖೆ ಅಭಿಯಂತರ ಕ್ರಮ ವಹಿಸಿ ನಿಗದಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಗಣ್ಯರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP