ಬಳ್ಳಾರಿ, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : `ನಶೆ ಮುಕ್ತ ಭಾರತ' ಸಂಕಲ್ಪದ ಜೊತೆಯಲ್ಲಿ `ನಮೋ ಯುವ ರನ್' ತಂಡವು ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಬಳ್ಳಾರಿ ನಗರದಲ್ಲಿ ನಗರದ ಆರಾಧ್ಯದೈವ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಎಚ್‍ಆರ್‍ಜಿ ವೃತ್ತದವರೆಗೆ ಶನಿವಾರ ಮ್ಯಾರಥಾನ್ ಅನ್ನು ಯಶಸ್ವಿಯಾಗಿ ನೆರವೇರಿಸಿತು.
ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಮ್ಯಾರಥಾನ್ ಉದ್ಘಾಟಿಸಿ, ದೇಶವನ್ನು ನಶೆ ಮುಕ್ತಗೊಳಿಸಬೇಕಿದೆ. ಯುವಶಕ್ತಿಯನ್ನು ದೇಶದಲ್ಲಿ ನಶೆಯಿಂದ ದೂರವಿಡಬೇಕಿದೆ. ಕಾರಣ `ನಮೋ ಯುವ ರನ್' ತಂಡವು ದೇಶಾದ್ಯಂತ `ನಶೆ ಮುಕ್ತ ಭಾರತ'ವನ್ನು ಹಮ್ಮಿಕೊಂಡಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಕ ಅನಿಲ್ ನಾಯ್ಡು, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷರಾದ ಗುರುಲಿಂಗನಗೌಡ ಪದಾಧಿಕಾರಿಗಳು - ಕಾರ್ಯಕರ್ತರು ಮ್ಯಾರಥಾನ್‍ನಲ್ಲಿ ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್