ಕೋಲಾರ, ೨೭ ಸೆಪ್ಟೆಂಬರ್(ಹಿ.ಸ) :
ಆ್ಯಂಕರ್ : ಕೋಲಾರ ನಗರದ ಕೆ ಎಸ್ ಆರ್ ಟಿ ಸಿ ವೃತ್ತದಲ್ಲಿ ನಾರಾಯಣ ಗೌಡರ ಬಣದ ಕ.ರ.ವೇದಿಕೆ ಜಿಲ್ಲಾದ್ಯಕ್ಷ ಮೇಡಿಹಾಳ ಎಂ ಕೆ ರಾಘವೇಂದ್ರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಂಸದೀಯ ರಾಜ್ಯ ಭಾಷಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ವಿರೋಧಿಸಿ ಹಿಂದಿ ಭಾಷೆಯಲ್ಲಿ ಹಾಕಿರುವ ಬ್ಯಾನರ್ ಗಳನ್ನು ಕಿತ್ತು ಹಾಕಿರುವ ಕ ರ ವೇ ೪೧ ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಗೊಳಿಸಲು ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯಾ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ಮೇಡಿಹಾಳ ರಾಘವೇಂದ್ರ ಮಾತನಾಡಿ ಕನ್ನಡಿಗರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವುದನ್ನು ಹಾಗೂ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯದ ಸಂಸದರುಗಳು ಹಿಂದಿ ಭಾಷೆಯಲ್ಲಿ ಹಾಕಿದ್ದ ಪೋಸ್ಟರ್ ಗಳ ಬಗ್ಗೆ ವಿರೋಧ ವ್ಯಕ್ತಪಡಿಸದಿರುವ ಬಗ್ಗೆ ಕ.ರ.ವೇ ಖಂಡಿಸುತ್ತದೆ ಎಂದರು.
ಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಹಾಕಿದ್ದ ಬ್ಯಾನರ್ ಗಳನ್ನು ಕಿತ್ತು ಹಾಕಿರುವ ಕ ರ ವೇದಿಕೆಯ ೪೧ ಮಂದಿ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿರುವದನ್ನು ಖಂಡಿಸುತ್ತೇವೆ ತಕ್ಷಣ ಬಂಧಿತ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.
ಕನ್ನಡ ಭಾಷೆ ನಮ್ಮ ನೆಲದ ಭಾಷೆಯಾಗಿದ್ದು,ಕನ್ನಡವೇ ರಾಜ್ಯ ಭಾಷೆ,ಉತ್ತರ ಭಾರತದವರು ಬಲವಂತವಾಗಿ ಹಿಂದಿ ಭಾಷೆ ಕಡ್ಡಾಯಗೊಳಿಸು ಹಾಗೂ ಎಲ್ಲಾ ರಂಗಗಳಲ್ಲೂ ಬೆಳಸುವ ಪ್ರಯತ್ನವನ್ನು ಕನ್ನಡಿಗರು ವಿರೋಧಿಸುತ್ತಾರೆ ಹಾಗೂ ಅನಿವಾರ್ಯ ಆದರೆ ರಾಜ್ಯದ ಉದ್ದಗಲಕ್ಕೂ ಕ್ರಾಂತಿಕಾರಿ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪದಾಧಿಕಾರಿ ವಿ.ಮುನಿರಾಜು, ಕೋಲಾರ ಶಶಿಕುಮಾರ,ತಾಲ್ಲೂಕು ಅಧ್ಯಕ್ಷರುಗಳಾದ ಮಾಲೂರು ಎಂ ಶ್ರೀನಿವಾಸ್, ಬಂಗಾರ ಪೇಟೆ ರಾಮ ಪ್ರಸಾದ್, ಡಿ .ವಿ. .ಮಂಜುನಾಥ್,ಮಾಲೂರು ಮಂಜುನಾಥ ಗೌಡ,ನಾರಾಯಣಸ್ವಾಮಿ,ಹುಸೇನ್, ಗಣೇಶ್ , ಕೆ. ನವೀನ್, ಗಣೇಶ್,ಅ ರಣಕುಮಾರ್, ಯಶವಂತ್,ಲೋಕೇಶ್,ವಿನೋದ್, ರಾಮಕೃಷ್ಣ,ಚಲಪತಿ,ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಚಿತ್ರ ; ಕೋಲಾರ ನಗರದ ಕೆ ಎಸ್ ಆರ್ ಟಿ ಸಿ ವೃತ್ತದಲ್ಲಿ ಕರವೇಯಿಂದ ಕೇಂದ್ರ ಸರ್ಕಾರದ ಸಂಸದೀಯ ರಾಜ್ಯ ಭಾಷಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮ ವಿರೋಧಿಸಿ ಹಿಂದಿ ಭಾಷೆಯಲ್ಲಿ ಹಾಕಿರುವ ಬ್ಯಾನರ್ ಗಳನ್ನು ಕಿತ್ತು ಹಾಕಿರುವ ಕರವೇ ೪೧ ಮಂದಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿರುವ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಗೊಳಿಸಲು ಒತ್ತಾಯಿಸಿ ಹಾಗೂ ಕೇಂದ್ರ ಮತ್ತು ರಾಜ್ಯಾ ಸರ್ಕಾರದ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್