ಅಂತೂರ ಬೆಂತೂರಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಗದಗ, 27 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಲೋಕಪಯೋಗಿ ಇಲಾಖೆಯ ಪ್ರಸಕ್ತ ಸಾಲಿನ ಅಂದಾಜು ಮೊತ್ತ 2 ಕೋಟಿ ಅನುದಾನದಲ್ಲಿ ಗದಗ ತಾಲೂಕಿನ ಅಂತೂರ- ಬೆಂತೂರ, ಮಲ್ಲಿಗವಾಡ, ನೀಲಗುಂದದ ರಸ್ತೆ ಸುಧಾರಣೆ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋ
ಪೋಟೋ


ಗದಗ, 27 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಲೋಕಪಯೋಗಿ ಇಲಾಖೆಯ ಪ್ರಸಕ್ತ ಸಾಲಿನ ಅಂದಾಜು ಮೊತ್ತ 2 ಕೋಟಿ ಅನುದಾನದಲ್ಲಿ ಗದಗ ತಾಲೂಕಿನ ಅಂತೂರ- ಬೆಂತೂರ, ಮಲ್ಲಿಗವಾಡ, ನೀಲಗುಂದದ ರಸ್ತೆ ಸುಧಾರಣೆ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಸಚಿವರು, ರಸ್ತೆ ಸುಧಾರಣೆಯಿಂದ ರೈತರು ವಿದ್ಯಾರ್ಥಿಗಳು, ವ್ಯಾಪರಸ್ಥರು ಸೇರಿದಂತೆ ಗ್ರಾಮದ ಜನರು ನಗರಕ್ಕೆ ಹೋಗಲು ಅನುಕೂಲವಾಗಲಿದೆ ಹಾಗಾಗಿ ರಸ್ತೆ ಕಾಮಗಾರಿಯು ಗುಣಮಟ್ಟದಿಂದ ಕೂಡಿರವ ಹಾಗೆ ಲೋಕೋಪಯೋಗಿ ಅಭಿಯಂತರ ಕ್ರಮವಹಿಸಬೇಕು. ಕಾಮಗಾರಿ ನಿಗದಿತ ಅವಧಿಯೋಳಗೆ ಕೆಲಸವನ್ನು ಮುಗಿಸಿ ಗ್ರಾಮೀಣ ಜನರಿಗೆ ಅನೂಕೂಲ ಕಲ್ಪಿಸಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಗ್ರಾಮದ ಗಣ್ಯರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande