ತುಮಕೂರು, 27 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ತುಮಕೂರು ಜಿಲ್ಲಾಡಳಿತ ಹಾಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನೂತನವಾಗಿ ನವೀಕರಿಸಿರುವ ಟೆನ್ನಿಸ್ ಕೋರ್ಟ್ ಹಾಗೂ ಆಟಗಾರರ ಕೊಠಡಿಯನ್ನು ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ತುಮಕೂರು ನಗರದಲ್ಲಿ ನವೀಕರಿಸಿರುವ ಟೆನ್ನಿಸ್ ಕೋರ್ಟ್ ಮಕ್ಕಳಿಗೆ ಟೆನ್ನಿಸ್ ಕಲಿಯಲು ಒಳ್ಳೆ ಅವಕಾಶ. ತುಮಕೂರು ಜಿಲ್ಲೆಯು ಮೊದಲಿನಿಂದಲೂ ಕ್ರೀಡೆಗೆ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿದ್ದಾರೆ. ನಾವೆಲ್ಲ ಮತ್ತಷ್ಟು ಉತ್ತೇಜನ ನೀಡಬೇಕು ಎಂದರು.
ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ರಿಕೆಟ್ ಮೈದಾನ ಮತ್ತು ಕ್ರಿಕೆಟ್ ಅಕಾಡೆಮಿ ನಿರ್ಮಾಣಕ್ಕೆ 40 ಎಕರೆ ಜಮೀನು ನೀಡಲಾಗಿದೆ. ಅದೇ ಜಾಗದ ಬಳಿ ಟೆನ್ನಿಸ್ ಅಕಾಡೆಮಿ ನಿರ್ಮಿಸಲು 5 ಎಕರೆ ಭೂಮಿ ನೀಡಲಾಗುವುದು. ಕಳೆದ ವರ್ಷ ಮಂಗಳೂರಿನಲ್ಲಿ ನಡೆದಿದ್ದ ರಾಜ್ಯ ಕ್ರೀಡಾಕೂಟ, ಡಿಸೆಂಬರ್ ತಿಂಗಳಲ್ಲಿ ತುಮಕೂರು ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa