ಭಯೋತ್ಪಾದನೆ ವಿಷಯದಲ್ಲಿ ಭಾರತ ಎಚ್ಚರಿಕೆ
ನ್ಯೂಯಾರ್ಕ್, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಅಂಗವಾಗಿ ನಡೆದ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಯೋತ್ಪಾದನೆಯ ಬಗ್ಗೆ ದ್ವಿಮುಖ ನೀತಿ ಅನುಸರಿಸುವ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡರು. ಭಯೋತ
G20


ನ್ಯೂಯಾರ್ಕ್, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದ ಅಂಗವಾಗಿ ನಡೆದ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಯೋತ್ಪಾದನೆಯ ಬಗ್ಗೆ ದ್ವಿಮುಖ ನೀತಿ ಅನುಸರಿಸುವ ರಾಷ್ಟ್ರಗಳನ್ನು ತರಾಟೆಗೆ ತೆಗೆದುಕೊಂಡರು.

ಭಯೋತ್ಪಾದನೆ ಅಭಿವೃದ್ಧಿಗೆ ದೊಡ್ಡ ಬೆದರಿಕೆ. ಅದನ್ನು ಸಹಿಸುವುದು ಅಥವಾ ಬೆಂಬಲಿಸುವುದು ಜಗತ್ತಿಗೆ ಹಾನಿ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಂತರರಾಷ್ಟ್ರೀಯ ಸಮುದಾಯದ ಹಿತಾಸಕ್ತಿ ಎಂದು ಹೇಳಿದರು.

ಜೈಶಂಕರ್, ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಮಾತನಾಡಿ, ಜಗತ್ತಿಗೆ ಹೊಸ ಜಾಗತಿಕ ಕಾರ್ಯಪಡೆ ಅಗತ್ಯವಿದೆ ಎಂದು ಹೇಳಿದರು. ವಲಸೆ, ವ್ಯಾಪಾರ ಹಾಗೂ ಸರಬರಾಜು ಸರಪಳಿ ಕುರಿತ ಅನಿಶ್ಚಿತತೆ ನಡುವೆ ರಾಷ್ಟ್ರಗಳು ಸಹಕಾರದಿಂದ ಮುಂದೆ ಬರಬೇಕೆಂದೂ ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande