ನವದೆಹಲಿ, 26 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳು ಇಂದು ದೌರ್ಬಲ್ಯ ತೋರಿಸಿದ್ದು, ಅಮೆರಿಕಾ, ಯುರೋಪ್ ಹಾಗೂ ಏಷ್ಯಾದ ಪ್ರಮುಖ ಸೂಚ್ಯಂಕಗಳು ಕುಸಿದಿವೆ. ಅಮೆರಿಕದ ಎಸ್ & ಪಿ 500 ಮತ್ತು ನ್ಯಾಸ್ಡಾಕ್ ತಲಾ ಶೇ. 0.50 ಇಳಿದರೆ, ಯುರೋಪ್‌ನ ಎಫ್ ಟಿಎಸ್ಸಿ, ಸಿಎಎಕ್ಸ, ಡಿಎಎಕ್ಸ ಸೂಚ್ಯಂಕಗಳು ಸಹ ಕುಸಿದವು.
ಏಷ್ಯಾದ ಮಾರುಕಟ್ಟೆಗಳಲ್ಲಿ ಒತ್ತಡ ಹೆಚ್ಚಿದ್ದು, ನಿಕ್ಕಿ, ಕೋಸ್ಪಿ, ತೈವಾನ್, ಹ್ಯಾಂಗ್ ಸೆಂಗ್, ಶಾಂಘೈ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಆದರೆ ಜಕಾರ್ತಾ ಮತ್ತು ಸ್ಟ್ರೈಟ್ಸ್ ಟೈಮ್ಸ್ ಸೂಚ್ಯಂಕಗಳು ಸ್ವಲ್ಪ ಲಾಭ ಕಂಡಿವೆ.
ಭಾರತದ ಗಿಪ್ಟಿ ನಿಫ್ಟಿ 101 ಅಂಕಗಳಷ್ಟು ಕುಸಿದು 24,857.50 ಕ್ಕೆ ಕುಸಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa