ಏಷ್ಯಾ ಕಪ್ 2025 : ಪಾಕಿಸ್ತಾನ ಫೈನಲ್‌ಗೆ
ದುಬೈ, 26 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಪಾಕಿಸ್ತಾನವು ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿ ಏಷ್ಯಾ ಕಪ್ 2025 ಫೈನಲ್‌ಗೆ ಪ್ರವೇಶಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದ ಪಾಕಿಸ್ತಾನ, ಬಾಂಗ್ಲಾದೇಶವನ್ನು 9 ವಿಕೆಟ್‌ಗೆ 124 ರನ್‌ಗಳಲ್ಲಿ ತಡೆದು ಜಯ ಸಾಧಿಸಿತು.
Cricket


ದುಬೈ, 26 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನವು ಬಾಂಗ್ಲಾದೇಶವನ್ನು 11 ರನ್‌ಗಳಿಂದ ಸೋಲಿಸಿ ಏಷ್ಯಾ ಕಪ್ 2025 ಫೈನಲ್‌ಗೆ ಪ್ರವೇಶಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿದ ಪಾಕಿಸ್ತಾನ, ಬಾಂಗ್ಲಾದೇಶವನ್ನು 9 ವಿಕೆಟ್‌ಗೆ 124 ರನ್‌ಗಳಲ್ಲಿ ತಡೆದು ಜಯ ಸಾಧಿಸಿತು.

ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ (3/17), ಹ್ಯಾರಿಸ್ ರೌಫ್ (3 ವಿಕೆಟ್) ಮತ್ತು ಸ್ಯಾಮ್ ಅಯೂಬ್ (2/16) ಬೌಲಿಂಗ್ ತಾರೆಗಳಾದರು. ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್ 3 ವಿಕೆಟ್ ಪಡೆದರು.

ಪಾಕಿಸ್ತಾನ ಇದೀಗ ಸೆಪ್ಟೆಂಬರ್ 28 ರಂದು ನಡೆಯುವ ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande