ಕೊಪ್ಪಳ : ಮೂರು ದಿನ `ಪೆಂಕಾಕ್ ಸಿಲತ್’ ರಾಷ್ಟ್ರೀಯ ಕ್ರೀಡಾಕೂಟ
ಕೊಪ್ಪಳ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಗರದಲ್ಲಿ ಇದೇ ಸೆಪ್ಟೆಂಬರ್ 26 ರಿಂದ ಮೂರು ದಿನಗಳ ಕಾಲ ನಡೆಯುವ 13ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಕ್ರೀಡಾಕೂಟಕ್ಕೆ ಸಂಸದರು ಹಾಗೂ ರಾಜ್ಯ ಪೆಂಕಾಕ್ ಸಿಲತ್ ಕಾರ್ಯಾಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳ ಕ್ರೀಡಾಕೂಟಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾ
ಕೊಪ್ಪಳ : ಮೂರು ದಿನ `ಪೆಂಕಾಕ್ ಸಿಲತ್’ ರಾಷ್ಟ್ರೀಯ ಕ್ರೀಡಾಕೂಟ


ಕೊಪ್ಪಳ : ಮೂರು ದಿನ `ಪೆಂಕಾಕ್ ಸಿಲತ್’ ರಾಷ್ಟ್ರೀಯ ಕ್ರೀಡಾಕೂಟ


ಕೊಪ್ಪಳ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಗರದಲ್ಲಿ ಇದೇ ಸೆಪ್ಟೆಂಬರ್ 26 ರಿಂದ ಮೂರು ದಿನಗಳ ಕಾಲ ನಡೆಯುವ 13ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಕ್ರೀಡಾಕೂಟಕ್ಕೆ ಸಂಸದರು ಹಾಗೂ ರಾಜ್ಯ ಪೆಂಕಾಕ್ ಸಿಲತ್ ಕಾರ್ಯಾಧ್ಯಕ್ಷರಾದ ಕೆ. ರಾಜಶೇಖರ ಹಿಟ್ನಾಳ ಕ್ರೀಡಾಕೂಟಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಅವರ ನಿವಾಸದಲ್ಲಿ ಕ್ರೀಡಾಕೂಟದ ಆಮಂತ್ರಣವನ್ನು ಗುರುವಾರ ಬಿಡುಗಡೆಗೊಳಿಸಿದ ಅವರು, ಇದೇ ಮೊದಲ ಬಾರಿಗೆ ಸುಮಾರು 27 ರಾಜ್ಯಗಳ 12 ನೂರಕ್ಕೂ ಹೆಚ್ಚಿನ ಕ್ರೀಡಾಪಟುಗಳು ಹಾಗೂ 250 ಜನ ಕೋಚ್, ಮ್ಯಾನೇಜರ್ ರೆಫರಿಗಳು ಭಾಗವಹಿಸುತ್ತಿರುವದು ದೊಡ್ಡ ಕಾರ್ಯಕ್ರಮವಾಗಿದೆ ಗಣ್ಯರು, ಮಾಧ್ಯಮದವರು, ಅಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಲ್ಲೆಯಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವದಕ್ಕೆ ಸಂತಸಗೊಂಡು ಪೂಜ್ಯ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಸತಿ ಹಾಗೂ ಊಟಕ್ಕೆ ಬಹಳ ಸಹಕಾರ ನೀಡಿದ್ದಾರೆ, ಸುಮಾರು 800 ಬಾಲಕರು ಮತ್ತು ಮುಖ್ಯಸ್ಥರಿಗೆ ಅಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಟನಕನಕಲ್ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ಶಾಲೆಯಲ್ಲಿ ಸುಮಾರು 400 ಬಾಲಕಿಯರಿಗೆ ವಸತಿ ಕಲ್ಪಿಸಲಾಗಿದೆ ಎಂದರು. ಈ ಕ್ರೀಡಾಕೂಟದಲ್ಲಿ ವಿಜೇತರಿಗೆ ಸಮಗ್ರ ಪ್ರಶಸ್ತಿಯನ್ನು ನಾಲ್ಕು ವಿಭಾಗದಲ್ಲಿ ನೀಡಲಾಗುತ್ತಿದೆ, ರಾಷ್ಟ್ರೀಯ ಕ್ರೀಡಾ ಮಂತ್ರಾಲಯ, ಸಾಯಿ, ಇಂಟರ್‍ನ್ಯಾಷನಲ್ ಓಲಂಪಿಕ್ ಮಾನ್ಯತೆ ಹೊಂದಿರುವ ಎಲ್ಲಾ ವಿಭಾಗದಲ್ಲಿ ಕ್ರೀಡೆಯಿದ್ದು, ಉದ್ಯೋಗ ಮತ್ತು ಶಿಕ್ಷಣದ ಕ್ರೀಡಾ ಕೋಟಾದಲ್ಲಿ ಪೆಂಕಾಕ್ ಸಿಲತ್ (ಮಾರ್ಷಿಯಲ್ ಆರ್ಟ್) ಬರುತ್ತಿರುವದರಿಂದ ಕ್ರೀಡೆಗೆ ಹೆಚ್ಚಿನ ಮಹತ್ವ ಇದೆ ಸದರಿ ಕ್ರೀಡೆಯಲ್ಲಿ ಸಿಂಗಾ, ಮೆಕಾನ್, ಪ್ರಿ-ಟೀನ್, ಸಬ್ ಜೂನಿಯರ್ ಮತ್ತು ಜೂನಿಯರ್ ಹೀಗೆ ಐದು ವಿಭಾಗಗಳಿವೆ ಎಂದರು.

ಕ್ರೀಡಾಕೂಟವನ್ನು ಭಾರತೀಯ ಪೆಂಕಾಕ್ ಸಿಲತ್ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಅಸೊಸಿಯೇಷನ್ ಜಿಲ್ಲೆಯ ಅಥ್ಲೆಟಿಕ್ ಅಸೊಸಿಯೇಷನ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಕಾರದೊಂದಿಗೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮತ್ತು ರಾಜ್ಯ ಸಿಲತ್ ಜಂಟಿ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ರಾಷ್ಟ್ರೀಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ್ ಟೈಲರ್, ಜಿಲ್ಲಾ ಅಧ್ಯಕ್ಷ ಮೌನೇಶ ವಡ್ಡಟ್ಟಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಬದಾಮಿ, ಕಾಂಗ್ರೆಸ್ ಮುಖಂಡರಾದ ಗಾಳೆಪ್ಪ ಪೂಜಾರ ಇತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande