ದುಬೈ, 25 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಏಷ್ಯಾ ಕಪ್ 2025ರ ಸೂಪರ್ ಫೋರ್ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಮಣಿಸಿ ಫೈನಲ್‌ಗೆ ತಲುಪಿದೆ. ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದರೆ, ಬಾಂಗ್ಲಾದೇಶ–ಪಾಕಿಸ್ತಾನ ಪಂದ್ಯವು ಈಗ ನಿರ್ಣಾಯಕ ಸೆಮಿಫೈನಲ್ ಆಗಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಅಭಿಷೇಕ್ ಶರ್ಮಾ 75 (37 ಎಸೆತ, 6x4, 5x6) ರನ್‌ಗಳ ಸ್ಫೋಟಕ ಆಟವಾಡಿ ಇನ್ನಿಂಗ್ಸ್‌ನ ಹೀರೋ ಆದರು. ಹಾರ್ದಿಕ್ ಪಾಂಡ್ಯ 38 ರನ್ ಸೇರಿಸಿದರು. ಬಾಂಗ್ಲಾದೇಶ ಪರ ರಿಷಾದ್ ಹೊಸೇನ್ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 127 ರನ್‌ಗಳಿಗೆ ಆಲೌಟ್ ಆಯಿತು. ಸೈಫ್ ಹಸನ್ 69 ರನ್ ಗಳಿಸಿದರೂ ಉಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಭಾರತದ ಬೌಲರ್‌ಗಳಲ್ಲಿ ಕುಲ್ದೀಪ್ ಯಾದವ್ 3 ವಿಕೆಟ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದು ಜಯಕ್ಕೆ ಕಾರಣರಾದರು.
ಈ ಗೆಲುವಿನಿಂದ ಭಾರತ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಂಡಿದೆ. ಈಗ ಅಭಿಮಾನಿಗಳ ಗಮನ ಬಾಂಗ್ಲಾದೇಶ–ಪಾಕಿಸ್ತಾನ ನಡುವಿನ ಮಹತ್ವದ ಸೆಮಿ ಫೈನಲ್ ಮೇಲೆ ನೆಟ್ಟಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa