ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೇಶದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 5,023 ಎಂಬಿಬಿಎಸ್ ಹಾಗೂ 5,000 ಸ್ನಾತಕೋತ್ತರ ಸೀಟುಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2025-26 ರಿಂದ 2028-29ರವರೆಗೆ ಜಾರಿಯಾಗುವ ಈ ಯೋಜನೆಯ ಒಟ್ಟು ವೆಚ್ಚ ₹15,034.50 ಕೋಟಿ ಆಗಿದ್ದು, ಅದರಲ್ಲಿ ಕೇಂದ್ರ ಸರ್ಕಾರದ ಪಾಲು ₹10,303.20 ಕೋಟಿ. ಪ್ರತಿ ಸೀಟಿಗೆ ಸರಾಸರಿ ವೆಚ್ಚ ₹1.5 ಕೋಟಿ ಆಗಲಿದೆ.
ಈ ನಿರ್ಧಾರದಿಂದ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟ ಮತ್ತಷ್ಟು ಬಲಪಡಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa