ಗುಮ್ಲಾ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಕೆಚ್ಕಿ ಕಾಡಿನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಜೆಜೆಎಂಪಿ ಉಗ್ರರು ಹತರಾಗಿದ್ದಾರೆ. ಬಿಷನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಈ ಕಾರ್ಯಾಚರಣೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಹತರಾದವರಲ್ಲಿ ಉಪ-ವಲಯ ಕಮಾಂಡರ್ ಲಾಲು ಲೋಹರಾ (ಲೋಹರ್ದಗಾ), ಉಪ-ಕಮಾಂಡರ್ ಛೋಟು ಓರಾನ್ (ಲತೇಹಾರ್) ಹಾಗೂ ಸುಜಿತ್ ಓರಾನ್ (ಲೋಹರ್ದಗಾ) ಸೇರಿದ್ದಾರೆ. ಲಾಲು ಮತ್ತು ಛೋಟು ಮೇಲೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಘಟನಾ ಸ್ಥಳದಿಂದ ಎಕೆ-56 ರೈಫಲ್, ಎಸ್ಎಲ್ಆರ್ ಬಂದೂಕು ಮತ್ತು ಐಎನ್ಎಸ್ಎಎಸ್ ರೈಫಲ್ ವಶಪಡಿಸಿಕೊಳ್ಳಲಾಗಿದೆ.
ಪೋಲಿಸ್ ವರಿಷ್ಠಾಧಿಕಾರಿ ಹ್ಯಾರಿಸ್ ಬಿನ್ ಜಮಾನ್ ಮೂವರು ಉಗ್ರರ ಹತ್ಯೆಯನ್ನು ದೃಢಪಡಿಸಿದ್ದು, ಜಾರ್ಖಂಡ್ ಜಾಗ್ವಾರ್ಸ್ ಮತ್ತು ಗುಮ್ಲಾ ಜಿಲ್ಲಾ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು.
ಪೊಲೀಸರ ತಂಡವನ್ನು ಕಂಡು ಉಗ್ರರು ಗುಂಡಿನ ದಾಳಿ ನಡೆಸಿದ ನಂತರ ನಡೆದ ಪ್ರತಿದಾಳಿಯಲ್ಲಿ ಮೂವರು ಹತರಾದರೆ, ಒಬ್ಬನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa