ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಷೇರುಪೇಟೆಯಲ್ಲಿ ಇಂದು ಕುಸಿತ ಕಂಡಿದೆ.
ಸೆನ್ಸೆಕ್ಸ್ 286 ಅಂಕ ಇಳಿದು 81,815 ಕ್ಕೆ ತಲುಪಿದೆ. ನಿಫ್ಟಿ 74 ಅಂಕ ಕುಸಿದು 24,094 ಅಂಕಗಳಲ್ಲಿ ವಹಿವಾಟು ನಡೆಯುತ್ತಿದೆ.
ಮಾರುತಿ ಸುಜುಕಿ, ಬಜಾಜ್ ಫೈನಾನ್ಸ್, ಟ್ರೆಂಟ್, ಏಷ್ಯನ್ ಪೇಂಟ್ಸ್, ಎಸ್‌ಬಿಐ ಷೇರುಗಳು ಏರಿಕೆ ಕಂಡರೆ, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್, ಐಸಿಐಸಿಐ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಭಾರ್ತಿ ಏರ್‌ಟೆಲ್ ಷೇರುಗಳು ಇಳಿಕೆ ಕಂಡಿವೆ.
ಒಟ್ಟು 2,141 ಷೇರುಗಳಲ್ಲಿ ವಹಿವಾಟು ನಡೆದಿದ್ದು, 1,040 ಷೇರುಗಳು ಲಾಭ, 1,101 ಷೇರುಗಳು ನಷ್ಟ ದಾಖಲಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa