ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೈಋತ್ಯ ದೆಹಲಿ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆ ಪ್ರದೇಶದಲ್ಲಿ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಡಾ. ಪಾರ್ಥ ಸಾರಥಿ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಆರೋಪ ಹೊರಿಸಲಾಗಿದೆ. ಶ್ರೀ ಶೃಂಗೇರಿ ಮಠದ ಆಡಳಿತಾಧಿಕಾರಿ ಪಿ.ಎ. ಮುರಳಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನಲ್ಲಿ ಓದುತ್ತಿದ್ದ 32 ವಿದ್ಯಾರ್ಥಿನಿಯರ ಹೇಳಿಕೆಗಳಲ್ಲಿ, 17 ಮಂದಿ ಸ್ವಾಮಿಯಿಂದ ದೈಹಿಕ ಹಾಗೂ ಆನ್ಲೈನ್ ಮೂಲಕ ಅಶ್ಲೀಲ ಕಿರುಕುಳ ಅನುಭವಿಸಿರುವುದಾಗಿ ಹೇಳಿದ್ದಾರೆ.
ಕೆಲ ವಿದ್ಯಾರ್ಥಿನಿಯರು, ಸಂಸ್ಥೆಯ ಕೆಲವು ಮಹಿಳಾ ಅಧ್ಯಾಪಕರು ಮತ್ತು ಆಡಳಿತ ಅಧಿಕಾರಿಗಳಿಂದ ಒತ್ತಡ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಪೋಲೀಸ್ ತನಿಖೆಯಲ್ಲಿ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್ (39 UN 1) ಹೊಂದಿರುವ ಸ್ವಾಮಿಯ ವೋಲ್ವೋ ಕಾರನ್ನು ವಶಪಡಿಸಲಾಗಿದೆ. ಆದಾಗ್ಯೂ, ಸ್ವಾಮಿ ತಲೆಮರೆಸಿಕೊಂಡು ಬಂಧನದಿಂದ ತಪ್ಪಿಸಿಕೊಂಡಿದ್ದಾರೆ.
ದೆಹಲಿ ಪೊಲೀಸ್ ಹಲವಾರು ತಂಡಗಳು ಅವರ ಹುಡುಕಾಟ ನಡೆಸುತ್ತಿದ್ದು, ಶೀಘ್ರವೇ ಜಾಮೀನು ರಹಿತ ವಾರಂಟ್ ಹೊರಡಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa