ಕೋಲ್ಕತ್ತಾ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಬಂಗಾಳದಲ್ಲಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ವಿದ್ಯುತ್ ಆಘಾತದಿಂದ 10 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 8 ಮಂದಿ ಕೋಲ್ಕತ್ತಾದವರೇ ಎಂದು ವಿಪತ್ತು ನಿರ್ವಹಣಾ ಇಲಾಖೆ ದೃಢಪಡಿಸಿದೆ.
ಆರು ಗಂಟೆಗಳಲ್ಲಿ 300 ಮಿ.ಮೀ. ಮಳೆ ಸುರಿದು 39 ವರ್ಷದ ದಾಖಲೆಯನ್ನು ಮುರಿದಿದೆ. ಕೋಲ್ಕತ್ತಾದ ಅನೇಕ ರಸ್ತೆ, ರೈಲುಮಾರ್ಗ ಮತ್ತು ಮೆಟ್ರೋ ಜಲಾವೃತಗೊಂಡು ಸಂಚಾರ ಸ್ಥಗಿತವಾಯಿತು. ವಿಮಾನ ನಿಲ್ದಾಣದಲ್ಲಿ 60ಕ್ಕೂ ಹೆಚ್ಚು ವಿಮಾನಗಳು ರದ್ದು, 40ಕ್ಕೂ ಹೆಚ್ಚು ವಿಳಂಬಗೊಂಡವು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಇಎಸ್‌ಸಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆರೋಪಿಸಿದರೆ, ವಿರೋಧ ಪಕ್ಷ ಸರ್ಕಾರವೇ ಎಚ್ಚರಿಕೆ ನಿರ್ಲಕ್ಷಿಸಿದೆ ಎಂದು ಟೀಕಿಸಿದೆ.
ಮಳೆಯಿಂದ ದುರ್ಗಾ ಪೂಜಾ ಪೆಂಡಾಲ್‌ಗಳು ಹಾನಿಗೊಳಗಾಗಿ ಸಿದ್ಧತೆ ವ್ಯತ್ಯಯಗೊಂಡಿದೆ. ಬಂಗಾಳ ಕೊಲ್ಲಿಯ ಕಡಿಮೆ ಒತ್ತಡದಿಂದ ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa