ರಾಯಚೂರು, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ರಿಪೋರ್ಟರ್ಸ್ ಗಿಲ್ಡ್, ರೋಟರಿ ಕ್ಲಬ್ ರಾಯಚೂರು ಹಾಗೂ ವೇದಾಂತ ಕಾಲೇಜ್ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 26 ರಂದು ರಾಯಚೂರಿನ ಪತ್ರಿಕಾ ಭವನದಲ್ಲಿ ಪತ್ರಕರ್ತರ ಹಾಗೂ ಪತ್ರಕರ್ತರ ಮಕ್ಕಳಿಗಾಗಿ ಒಂದು ದಿನದ ಚದುರಂಗ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ತಿಳಿಸಿದ್ದಾರೆ.
ಕಾರ್ಯಾಗಾರವನ್ನು ಬಿಜಿವಿಎಸ್‌ನ ಜಿಲ್ಲಾ ಸಂಚಾಲಕ ಸೈಯದ್ ಹಫೀಜುಲ್ಲಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರವಿಕುಮಾರ್ ಗಣೇಕಲ್, ಮಾಜಿ ಅಸಿಸ್ಟೆಂಟ್ ಗೌರ್ನರ್ ಎನ್.ಶಿವಶಂಕರ ವಕೀಲರು, ವೇದಾಂತ ಕಾಲೇಜ್ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ ಭಾಗವಹಿಸಲಿದ್ದಾಾರೆ. ಕಾರ್ಯಗಾರದಲ್ಲಿ ಭಾಗವಹಿಸುವ ಮಕ್ಕಳಿಗೆ ಹಾಗೂ ಪತ್ರಕರ್ತರಿಗೆ ಚೆಸ್ ತರಬೇತುದಾರರಾದ ಹನುಮಂತ ಯಾದವ್, ಶರತ್‌ಕುಮಾರ್, ಪೂಜಾ ಯಾದವ್, ಕೀರ್ತಿಕಿಟ್ಟು ಮಾರ್ಗದರ್ಶನ ಮಾಡಲಿದ್ದಾರೆ.
ಆಸಕ್ತ ಪತ್ರಕರ್ತರು, ಪತ್ರಕರ್ತರ ಮಕ್ಕಳು ತಮ್ಮ ಹೆಸರನ್ನು ಸೆ.25 ರ ವರೆಗೂ ನೋಂದಾಯಿಸಿಕೊಳ್ಳಬಹುದು. ಭಾಗವಹಿಸುವ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಚೆಸ್ ಕಿಟ್ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್