ಗಾಂಧಿನಗರ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ದೇಶವಾಸಿಗಳಿಗೆ “ಒಂದೇ ಒಂದು ವಿದೇಶಿ ವಸ್ತುವನ್ನೂ ಖರೀದಿಸಬೇಡಿ” ಎಂದು ಮನವಿ ಮಾಡಿ, ಸ್ವದೇಶಿ ಉತ್ಪನ್ನಗಳ ಬಳಕೆ ಮೂಲಕ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಬಹುದು ಎಂದು ಹೇಳಿದರು.
ಗುಜರಾತನ ಗಾಂಧಿನಗರ ಜಿಲ್ಲೆಯ ಕಲೋಲ್‌ನಲ್ಲಿ ₹144 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಶಾ, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ನಡೆದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಗಾಂಧಿನಗರ ಕ್ಷೇತ್ರದಲ್ಲಿಯೇ ಆಗಿವೆ ಎಂದು ಹೇಳಿದರು.
ಸ್ವದೇಶಿ ಪದ್ಧತಿಯನ್ನು ಅಳವಡಿಸಿಕೊಂಡರೆ, ಆರ್ಥಿಕತೆಯನ್ನು ಬಲಪಡಿಸಿ, ಸಂತೋಷದಾಯಕ ದೀಪಾವಳಿಯನ್ನು ಆಚರಿಸಬಹುದು ಎಂದು ಶಾ ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa