ಏಷ್ಯಾ ಕಪ್ 2025 – ಪಾಕಿಸ್ತಾನಕ್ಕೆ ಫೈನಲ್ ಆಸೆ ಜೀವಂತ
ದುಬೈ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಏಷ್ಯಾ ಕಪ್ 2025 ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 133 ರನ್‌ಗಳಿಗೂ ಸೀಮಿತವಾಯಿತು. ಕಮಿಂದು ಮೆಂಡಿಸ್ (50)
Pak


ದುಬೈ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಏಷ್ಯಾ ಕಪ್ 2025 ಸೂಪರ್-4 ಹಂತದ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 133 ರನ್‌ಗಳಿಗೂ ಸೀಮಿತವಾಯಿತು. ಕಮಿಂದು ಮೆಂಡಿಸ್ (50) ಮಾತ್ರ ಹೋರಾಟ ತೋರಿದರು. ಪಾಕಿಸ್ತಾನ ಪರ ಶಾಹೀನ್ ಶಾ ಅಫ್ರಿದಿ 3 ವಿಕೆಟ್‌ಗಳನ್ನು ಪಡೆದರೆ, ಹರೀಶ್ ರೌಫ್ ಮತ್ತು ಹುಸೇನ್ ತಲಾತ್ ತಲಾ 2 ವಿಕೆಟ್‌ಗಳನ್ನು ಪಡೆದರು.

ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲಿ 45 ರನ್‌ಗಳ ಜೋಡಣೆ ಮಾಡಿದರೂ ತೀಕ್ಷಣಾ ಸತತ ಎಸೆತಗಳಲ್ಲಿ ಆರಂಭಿಕರನ್ನು ಬೌಲ್ಡ್ ಮಾಡಿ ಪಂದ್ಯವನ್ನು ರೋಚಕಗೊಳಿಸಿದರು. ಒಂದು ಹಂತದಲ್ಲಿ ಪಾಕಿಸ್ತಾನ 12 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಹುಸೇನ್ ತಲಾತ್ ಮತ್ತು ಮೊಹಮ್ಮದ್ ನವಾಜ್ (ಅಜೇಯ 32, 32) ಶಾಂತ ಆಟದ ಮೂಲಕ 58 ರನ್‌ಗಳ ಅಜೇಯ ಜೊತೆಯಾಟ ಕಟ್ಟಿದರು. ಪಾಕಿಸ್ತಾನ ಇನ್ನೂ 12 ಎಸೆತ ಬಾಕಿ ಇರುವಾಗ ಗುರಿ ತಲುಪಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande