ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು ಚಂಡೀಗಢ ವಾಯುಪಡೆ ನೆಲೆಯಲ್ಲಿ ಮಿಗ್–21 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. 62 ವರ್ಷಗಳ ಸೇವೆ ಸಲ್ಲಿಸಿದ ಮಿಗ್–21 ಶೀಘ್ರದಲ್ಲೇ ಸೇವೆಯಿಂದ ನಿವೃತ್ತಿಯಾಗಲಿದೆ.
ಈ ಸಂದರ್ಭದಲ್ಲಿ ಮಿಗ್–21, ಜಾಗ್ವಾರ್ ಹಾಗೂ ಸೂರ್ಯಕಿರಣ್ ಏರೋಬ್ಯಾಟಿಕ್ಸ್ ತಂಡಗಳು ಅದ್ಭುತ ಫ್ಲೈಪಾಸ್ಟ್ ಪ್ರದರ್ಶಿಸಿದವು. 2019ರ ಬಾಲಕೋಟ್ ದಾಳಿಯ ನಂತರ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಪಾಕಿಸ್ತಾನಿ ಎಫ್-16 ಅನ್ನು ಹೊಡೆದುರುಳಿಸಿದ ಕ್ಷಣವನ್ನೂ ನೆನಪಿಸುವಂತೆ ಮಿಗ್–21 ತನ್ನ ಶೌರ್ಯವನ್ನು ತೋರಿಸಿತು.
ಸೆಪ್ಟೆಂಬರ್ 26ರಂದು ನಡೆಯುವ ವಿದಾಯ ಸಮಾರಂಭದಲ್ಲಿ ಮಿಗ್–21 ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸಲಾಗುವುದು. ಈ ಸಂದರ್ಭದಲ್ಲಿ ವಾಯುಪಡೆಯ ಮುಖ್ಯಸ್ಥರು ವಿಮಾನದ ಲಾಗ್‌ಬುಕ್‌ಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಹಸ್ತಾಂತರಿಸಲಿದ್ದಾರೆ. ಜಲ ಫಿರಂಗಿ ವಂದನೆ ಹಾಗೂ ವಿಶೇಷ ಡೆ ಕವರ್ ಬಿಡುಗಡೆ ಮೂಲಕ ಮಿಗ್–21 ಯುಗಕ್ಕೆ ಗೌರವ ಸಲ್ಲಿಸಲಾಗುತ್ತದೆ.
ಮಿಗ್–21 ನಿವೃತ್ತಿಯ ಬಳಿಕ ವಾಯುಪಡೆ 29 ಸ್ಕ್ವಾಡ್ರನ್‌ಗಳಿಗೆ ಇಳಿಯಲಿದ್ದು, ಸ್ವದೇಶಿ ಎಲ್‌ಸಿಎ ತೇಜಸ್ ಎಂ.ಕೆ-1 ಮತ್ತು ಎಂ.ಕೆ-2 ವಿಮಾನಗಳು ಇದರ ಸ್ಥಾನವನ್ನು ಭರಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa