ಛತ್ತೀಸ್‌ಗಢದಲ್ಲಿ 71 ನಕ್ಸಲರ ಸಾಮೂಹಿಕ ಶರಣಾಗತಿ
ದಂತೇವಾಡ, 24 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಒಟ್ಟು 71 ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಇವರಲ್ಲಿ 30 ಜನರ ಮೇಲೆ ಒಟ್ಟು ₹64 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಲೋನ್ ವರ್ರಾಟು ಅಭಿಯಾನದಲ್ಲಿ ಶರಣಾದ ನಕ್ಸಲರಿಗೆ ಸರ್ಕಾರದಿಂದ ತಕ್ಷಣ 50 ಸಾವಿರ
Surrender


ದಂತೇವಾಡ, 24 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ಒಟ್ಟು 71 ನಕ್ಸಲರು ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಇವರಲ್ಲಿ 30 ಜನರ ಮೇಲೆ ಒಟ್ಟು ₹64 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಲೋನ್ ವರ್ರಾಟು ಅಭಿಯಾನದಲ್ಲಿ ಶರಣಾದ ನಕ್ಸಲರಿಗೆ ಸರ್ಕಾರದಿಂದ ತಕ್ಷಣ 50 ಸಾವಿರ ನೆರವು ಹಾಗೂ ಕೌಶಲಾಭಿವೃದ್ಧಿ ತರಬೇತಿ, ಭೂಮಿ ಹಂಚಿಕೆ ಮೊದಲಾದ ಪುನರ್ವಸತಿ ಸೌಲಭ್ಯ ನೀಡಲಾಗುತ್ತದೆ.

ದಂತೇವಾಡ ಪೋಲಿಸ್ ವರಿಷ್ಠಾಧಿಕಾರಿ ಗೌರವ್ ರಾಯ್ ಈ ಕುರಿತು ಮಾಹಿತಿ ನೀಡಿದ್ದು ಲೋನ್ ವರ್ರಾಟು ಹಾಗೂ ಪೂನಾ ಮಾರ್ಗೇಮ್ ಅಭಿಯಾನಗಳ ಮೂಲಕ ನಕ್ಸಲರಿಗೆ ಹಿಂಸಾಚಾರ ತೊರೆದು ಶಾಂತಿ-ಅಭಿವೃದ್ಧಿಯ ದಾರಿಗೆ ಸೇರುವ ಸಂದೇಶ ನೀಡಲಾಗಿದೆ ಎಂದಿದ್ದಾರೆ.

ಕಳೆದ 19 ತಿಂಗಳಲ್ಲಿ ಈ ಅಭಿಯಾನದಿಂದ ಒಟ್ಟು 1113 ನಕ್ಸಲರು ಶರಣಾಗಿದ್ದು, ಇವರಲ್ಲಿ 226 ಮಹಿಳೆಯರು ಸಹ ಸೇರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande