ವಿಜಯದಶಮಿ : ಶತಮಾನೋತ್ಸವದ ಅಂಗವಾಗಿ ಆರ್ ಎಸ್ಎಸ್ ದಿನಾಂಕ ಸಮನ್ವಯ
ನಾಗ್ಪುರ, 23 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವದ ಅಂಗವಾಗಿ ಈ ಬಾರಿ ಇಂಗ್ಲಿಷ್ ಹಾಗೂ ಹಿಂದೂ ಕ್ಯಾಲೆಂಡರ್ ದಿನಾಂಕಗಳನ್ನು ಸಮನ್ವಯಗೊಳಿಸಲು ನಿರ್ಧರಿಸಿದೆ. ಸಂಘವನ್ನು ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಸೆಪ್ಟೆಂಬರ್ 27, 1925ರಂದು ವಿಜಯದಶಮಿಯಂದು ಸ್ಥಾಪ
Rss


ನಾಗ್ಪುರ, 23 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಶತಮಾನೋತ್ಸವದ ಅಂಗವಾಗಿ ಈ ಬಾರಿ ಇಂಗ್ಲಿಷ್ ಹಾಗೂ ಹಿಂದೂ ಕ್ಯಾಲೆಂಡರ್ ದಿನಾಂಕಗಳನ್ನು ಸಮನ್ವಯಗೊಳಿಸಲು ನಿರ್ಧರಿಸಿದೆ. ಸಂಘವನ್ನು ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಸೆಪ್ಟೆಂಬರ್ 27, 1925ರಂದು ವಿಜಯದಶಮಿಯಂದು ಸ್ಥಾಪಿಸಿದ್ದರು.

ಈ ಹಿನ್ನೆಲೆಯಲ್ಲಿ, ಈ ವರ್ಷ ಸೆಪ್ಟೆಂಬರ್ 27ರಂದು ನಾಗ್ಪುರದಲ್ಲಿ ಮೂರು ಮಾರ್ಗಗಳಿಂದ ಏಕಕಾಲದಲ್ಲಿ ಪಥಸಂಚಲನ ನಡೆಯಲಿದೆ. ಸಾವಿರಾರು ಸ್ವಯಂಸೇವಕರು ಭಾಗವಹಿಸಲಿದ್ದು, ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಮೆರವಣಿಗೆಯನ್ನು ಪರಿಶೀಲಿಸಲಿದ್ದಾರೆ.

ಮುಖ್ಯ ವಿಜಯದಶಮಿ ಕಾರ್ಯಕ್ರಮ ಅಕ್ಟೋಬರ್ 2ರಂದು ರೇಶಂಬಾಗ್ ಮೈದಾನದಲ್ಲಿ ನಡೆಯಲಿದ್ದು, ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಡಾ. ಭಾಗವತ್ ಭಾಷಣ ಮಾಡಲಿದ್ದಾರೆ. ಅಮೆರಿಕಾ, ಥೈಲ್ಯಾಂಡ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಘಾನಾ ಸೇರಿದಂತೆ ಅಂತರರಾಷ್ಟ್ರೀಯ ಪ್ರತಿನಿಧಿಗಳು ಸಹ ಪಾಲ್ಗೊಳ್ಳಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande