ಸ್ಪೇನ್‌ನ ಐತಾನಾ ಬೊನ್ಮತಿ ಸತತ ಮೂರನೇ ಬಾರಿಗೆ ಮಹಿಳಾ ಬ್ಯಾಲನ್ ಡಿ'ಓರ್ ಗೆಲುವು
ಪ್ಯಾರಿಸ್, 23 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಸ್ಪೇನ್ ಮತ್ತು ಬಾರ್ಸಿಲೋನಾದ ತಾರೆ ಮಿಡ್‌ಫೀಲ್ಡರ್ ಐತಾನಾ ಬೊನ್ಮತಿ ಸೋಮವಾರ ನಡೆದ ಸಮಾರಂಭದಲ್ಲಿ ಸತತ ಮೂರನೇ ಬಾರಿಗೆ ಮಹಿಳಾ ಬ್ಯಾಲನ್ ಡಿ''ಓರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. 27 ವರ್ಷದ ಬೊನ್ಮತಿ, ಯುರೋ 2025ರಲ್ಲಿ ಟೂರ್ನಮೆಂಟ್‌ನ ಆಟಗಾರ್ತಿ
Balon


ಪ್ಯಾರಿಸ್, 23 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಸ್ಪೇನ್ ಮತ್ತು ಬಾರ್ಸಿಲೋನಾದ ತಾರೆ ಮಿಡ್‌ಫೀಲ್ಡರ್ ಐತಾನಾ ಬೊನ್ಮತಿ ಸೋಮವಾರ ನಡೆದ ಸಮಾರಂಭದಲ್ಲಿ ಸತತ ಮೂರನೇ ಬಾರಿಗೆ ಮಹಿಳಾ ಬ್ಯಾಲನ್ ಡಿ'ಓರ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

27 ವರ್ಷದ ಬೊನ್ಮತಿ, ಯುರೋ 2025ರಲ್ಲಿ ಟೂರ್ನಮೆಂಟ್‌ನ ಆಟಗಾರ್ತಿ ಎಂಬ ಗೌರವ ಪಡೆದಿದ್ದರು. ಫೈನಲ್‌ನಲ್ಲಿ ಸ್ಪೇನ್ ಸೋತಿದ್ದರೂ, ತಮ್ಮ ಸಹ ಆಟಗಾರ್ತಿ ಮರಿಯೋನಾ ಕಾಲ್ಡೆಂಟೆಯ್ ಹಾಗೂ ಇಂಗ್ಲೆಂಡ್‌ನ ಅಲೆಸಿಯಾ ರುಸ್ಸೋ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು.

ಮಹಿಳಾ ಬ್ಯಾಲನ್ ಡಿ'ಓರ್ 2018ರಲ್ಲಿ ಆರಂಭವಾದ ಬಳಿಕ, ಬೊನ್ಮತಿ ಸತತ ಮೂರು ಬಾರಿ ಈ ಪ್ರಶಸ್ತಿ ಗೆದ್ದ ಪ್ರಥಮ ಆಟಗಾರ್ತಿ. ಇದರಿಂದ ಅವರು ಲಿಯೋನೆಲ್ ಮೆಸ್ಸಿ ಮತ್ತು ಮೈಕೆಲ್ ಪ್ಲಾಟಿನಿ ಮುಂತಾದ ದಂತಕಥೆಗಳ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande