ಇಂದೋರ, 23 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಧ್ಯ ಪ್ರದೇಶದ ಇಂದೋರ್‌ನ ರಾಣಿಪುರ ಪ್ರದೇಶದ ಜವಾಹರ್ ಮಾರ್ಗದಲ್ಲಿನ ಐದು ಅಂತಸ್ತಿನ ಕಟ್ಟಡ ಸೋಮವಾರ ರಾತ್ರಿ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಸಿಲುಕಿದ್ದ 14 ಜನರಲ್ಲಿ 12 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಂ ವರ್ಮಾ ತಿಳಿಸಿದ್ದಾರೆ.
ರಾತ್ರಿ ಸಂಭವಿಸಿದ ಈ ದುರಂತದ ನಂತರ, ಮಹಾನಗರ ಪಾಲಿಕೆ, ಪೊಲೀಸರು ಹಾಗೂ ಎಸ್‌ಡಿಇಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಮೂರು ಜೆಸಿಬಿಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಯಿತು. ಕಟ್ಟಡದಲ್ಲಿ ಆರು ಕುಟುಂಬಗಳು ವಾಸಿಸುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa