ಪೋರಬಂದರ್, 23 ಸೆಪ್ಟೆಂಬರ್(ಹಿ.ಸ.) :
ಆ್ಯಂಕರ್ : ಗುಜರಾತನ ಪೋರಬಂದರ್ ಕರಾವಳಿಯ ಜಾಮ್‌ನಗರ ಮೂಲದ ಹರಿ ದರ್ಶನ್ ಸರಕು ಹಡಗಿನಲ್ಲಿ ಇಂದು ಬೆಳಿಗ್ಗೆ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲಾಗದೇ ಇರುವ ಹಿನ್ನೆಲೆಯಲ್ಲಿ ಚೌಪಟ್ಟಿಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಆಡಳಿತ ನಿರ್ಬಂಧ ಹೇರಿದೆ.
ಅಧಿಕಾರಿಗಳ ಪ್ರಕಾರ, ಹಡಗಿನಿಂದ ನಿರಂತರ ಸ್ಫೋಟ ಶಬ್ದಗಳು ಕೇಳಿಬರುತ್ತಿವೆ. ಹಡಗಿನಲ್ಲಿದ್ದ ಎಲ್‌ಪಿಜಿ ಸಿಲಿಂಡರ್‌ಗಳಿಂದ ಸ್ಫೋಟಗಳು ಸಂಭವಿಸುತ್ತಿರುವುದಾಗಿ ಶಂಕಿಸಲಾಗಿದೆ. ಬೆಂಕಿ ನಿಯಂತ್ರಣಕ್ಕೆ ತೀವ್ರ ಪ್ರಯತ್ನಗಳು ನಡೆಯುತ್ತಿದ್ದು, ಕಾರಣ ತಿಳಿಯಲು ತನಿಖೆ ಆರಂಭವಾಗಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa