ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಚಿಕಿತ್ಸೆ ಫಲಕಾರಿಯಾಗದೇ ಅಪರಿಚಿತ ವ್ಯಕ್ತಿ ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ನಡೆದಿದೆ.
ಸುಮಾರು 65 ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ನಾಶಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಬಣ್ಣದ ಜಾಕೇಟ್, ನೀಲಿ ಬಣ್ಣದ ಜೀನ್ಸ್ ಧರಿಸಿದ್ದಾನೆ. ಇತನ ಬಗ್ಗೆ ಮಾಹಿತಿ ಅಥವಾ ಕುಟುಂಬಸ್ಥರ ಮಾಹಿತಿ ತಿಳಿದುಬಂದ್ರೇ ಗಾಂಧಿಚೌಕ್ ಪೊಲೀಸ ಠಾಣೆಯ 08352-250033ಗೆ ಸಂಪರ್ಕಿಸಲು ಗಾಂಧಿ ಚೌಕ್ ಪೊಲೀಸರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande