ವಿಜಯಪುರ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಇವತ್ತು ಒಂದು ಮಠಕ್ಕೆ ಸ್ವಾಮಿಜಿ ಆದವರನ್ನು ತೆಗೆಯುವ ಅಧಿಕಾರ ಟ್ರಸ್ಟ್‌ನವರಿಗೆ ಇರುವುದಿಲ್ಲ ಎಂದು ಮನಗೂಳಿಯ ಸಂಗನಬಸವ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಪಂಚಮಸಾಲಿ ಸಮಾಜಕ್ಕಾಗಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹಗಲಿರುಳು ದುಡಿದಿದ್ದಾರೆ. ಅವರಿಗೆ ಮತ್ತು ಟ್ರಸ್ಟ್ ನಡುವೆ ಏನಾಗಿದೆಯೋ ಗೊತ್ತಿಲ್ಲ. ಅದನ್ನು ನಾಲ್ಕು ಗೋಡೆಯ ನಡುವೆ ಕುಳಿತು ಮಾತನಾಡಿ ಚರ್ಚೆ ಮಾಡಬೇಕಿತ್ತು. ಮಠಾಧೀಶರನ್ನು ಉಚ್ಚಾಟನೆ ಮಾಡಬಾರದಿತ್ತು ಅನ್ನುವುದು ನನ್ನ ವಿಚಾರ. ಯಾವುದೇ ಮಠಾಧೀಶರನ್ನು ರಾಜಕೀಯ ವ್ಯಕ್ತಿಗಳು ತಮ್ಮ ಅನುಕೂಲಕ್ಕಾಗಿ ಬಳಕೆ ಮಾಡಿಕೊಳ್ಳಬಾರದು. ಅಲ್ಲದೇ, ವಿಜಯಪುರ ಮಠಾಧೀಶರ ಒಕ್ಕೂಟದಿಂದ ಚರ್ಚೆ ಮಾಡುತ್ತೇವೆ. ಚರ್ಚೆಯ ಬಳಿಕ ಒಂದು ನಿರ್ಣಯಕ್ಕೆ ಬರುತ್ತೇವೆ. ಅಲ್ಲಿ ಹಿರಿಯ ಮಠಾಧೀಶರು ನೀಡುವ ಮಾರ್ಗದರ್ಶನದಿಂದ
ಸ್ವಾಮೀಜಿಯ ಬೆನ್ನಿಗೆ ನಿಲ್ಲುವ ಪ್ರಯತ್ನವನ್ನ ಮಾಡುತ್ತೇವೆ ಎಂದರು.
ಇನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಸ್ತಿ ಮಾಡಿರುವ ವಿಚಾರಕ್ಕೆ ಮಾತನಾಡಿದ ಅವರು, ಅದು ನನಗೆ ಗೊತ್ತಿಲ್ಲ. ನಾನು ಅಷ್ಟಾಗಿ ಅವರ ಮಠಕ್ಕೆ ಹೋಗಿಲ್ಲ. ಪರ್ಯಾಯ ಪೀಠದ ವಿಚಾರ ನನಗಿಂತ ಹೆಚ್ಚಾಗಿ ಮಾಧ್ಯಮದವರಿಗೆ ಗೊತ್ತಿದೆ. ಬಸವಜಯಮೃತ್ಯುಂಜಯ ಸ್ವಾಮಿಜೀ ಹಿಂದೆ ನಾಲ್ಕು ಜನ ರಾಜಕಾರಣಿಗಳಿದ್ದಾರೆ. ಪರ್ಯಾಯ ಪೀಠದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ವಿಷಯ ಕೇಳಿದ್ದೇನೆ. ಆದರೆ ನಾನು ಅದೇ ಸಮಾಜದವನಾದರೂ ನಮ್ಮದು ಹಿರೇಮಠ ಎಲ್ಲ ಸಮಾಜಗಳಿಗೂ ಸಲ್ಲುವ ಮಠ. ಈಗಾಗಲೇ ಮೂರು ಪೀಠಗಳಿವೆ. ಇರುವ ಸ್ವಾಮೀಜಿಗಳನ್ನು ಚೆನ್ನಾಗಿ ನೋಡಿಕೊಂಡು ಹೋದರೆ ಸಾಕು. ಮತ್ತೊಂದು ಪರ್ಯಾಯ ಪೀಠದ ಅಗತ್ಯವಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande