ನವದೆಹಲಿ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನವರಾತ್ರಿಯ ಮೊದಲ ದಿನದಿಂದಲೇ ಹೊಸ ಜಿಎಸ್ಟಿ ದರಗಳು ಜಾರಿಗೆ ಬಂದಿದ್ದು, ಜನರಿಗೆ ದೊಡ್ಡ ಪರಿಹಾರ ದೊರಕಿದೆ. ಈಗ 5% ಮತ್ತು 18% ಎಂಬ ಎರಡು ಮುಖ್ಯ ಸ್ಲ್ಯಾಬ್‌ಗಳು ಜಾರಿಯಲ್ಲಿದ್ದು, ಐಷಾರಾಮಿ ವಸ್ತುಗಳಿಗೆ 40% ತೆರಿಗೆ ವಿಧಿಸಲಾಗಿದೆ.
ಸುಮಾರು 400ಕ್ಕೂ ಹೆಚ್ಚು ವಸ್ತುಗಳ ಬೆಲೆ ಇಳಿಕೆಯಾಗಿದ್ದು, ಅಡುಗೆ ಸಾಮಾನು, ಎಲೆಕ್ಟ್ರಾನಿಕ್ಸ್, ಔಷಧಿ, ವಾಹನಗಳು, ಎಫ್‌ಎಮ್‌ಸಿಜಿ ವಸ್ತುಗಳು ಅಗ್ಗವಾಗಿವೆ. ಸೋಪ್, ಪೌಡರ್, ಕಾಫಿ, ತುಪ್ಪ, ಎಣ್ಣೆ, ಡೈಪರ್, ಬಿಸ್ಕತ್ತುಗಳು ಮುಂತಾದ ದೈನಂದಿನ ಅಗತ್ಯ ವಸ್ತುಗಳಿಗೆ ಈಗ ಕೇವಲ 5% ತೆರಿಗೆ ವಿಧಿಸಲಾಗಿದೆ.
ಸಿಮೆಂಟ್ ಮೇಲೆ 28% ರಿಂದ 18% ಕ್ಕೆ, ಟಿವಿ, ಫ್ರಿಜ್, ಏಸಿ, ವಾಷಿಂಗ್ ಮೆಷಿನ್‌ಗಳ ಮೇಲೂ 18% ಕ್ಕೆ ತೆರಿಗೆ ಇಳಿಸಲಾಗಿದೆ. ಸಣ್ಣ ಕಾರುಗಳಿಗೆ 18% ಮತ್ತು ದೊಡ್ಡ ವಾಹನಗಳಿಗೆ 28% ತೆರಿಗೆ ವಿಧಿಸಲಾಗುತ್ತದೆ. ಸಲೂನ್, ಜಿಮ್ ಹಾಗೂ ಸ್ಪಾಗಳಂತಹ ಸೇವೆಗಳ ಮೇಲೂ ತೆರಿಗೆ 18% ರಿಂದ 5% ಕ್ಕೆ ಇಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಉತ್ಪನ್ನಗಳ ಖರೀದಿಯನ್ನು ಉತ್ತೇಜಿಸುವಂತೆ ಕರೆ ನೀಡಿದ್ದು, ಹೊಸ ಜಿಎಸ್ಟಿ ಸುಧಾರಣೆಗಳು ಹೂಡಿಕೆ ಆಕರ್ಷಿಸಿ, ಭಾರತದ ಬೆಳವಣಿಗೆಗೆ ವೇಗ ನೀಡಲಿವೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa