ನವದೆಹಲಿ, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ನಾಲ್ಕು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಶ್ರೀಲಂಕಾಕ್ಕೆ ಸೋಮವಾರ ತೆರಳಿದರು. ಅವರು ಕೊಲಂಬೊದಲ್ಲಿ ನಡೆಯಲಿರುವ 12ನೇ ಅಂತರರಾಷ್ಟ್ರೀಯ ಕಡಲ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿ ಸಮ್ಮೇಳನದ ವಿಷಯ “ಬದಲಾಗುತ್ತಿರುವ ಚಲನಶಾಸ್ತ್ರದ ಅಡಿಯಲ್ಲಿ ಹಿಂದೂ ಮಹಾಸಾಗರದ ಕಡಲ ಭೂದೃಶ್ಯ”.
ಭೇಟಿಯ ಅವಧಿಯಲ್ಲಿ ತ್ರಿಪಾಠಿ, ಶ್ರೀಲಂಕಾ ಪ್ರಧಾನಿ ಡಾ. ಹರಿಣಿ ಅಮರಸೂರ್ಯ, ಶ್ರೀಲಂಕಾ ನೌಕಾಪಡೆಯ ಮುಖ್ಯಸ್ಥ ವೈಸ್ ಅಡ್ಮಿರಲ್ ಕಾಂಚನಾ ಬಂಗೋಡ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. ಸಮುದ್ರ ಭದ್ರತೆ, ಸಾಮರ್ಥ್ಯ ವೃದ್ಧಿ, ತರಬೇತಿ ಮತ್ತು ದ್ವಿಪಕ್ಷೀಯ ಸಹಕಾರ ಬಲಪಡಿಸುವ ವಿಚಾರ ಚರ್ಚೆಯಾಗಲಿದೆ.
ಭಾರತ ಮತ್ತು ಶ್ರೀಲಂಕಾ ನೌಕಾಪಡೆಗಳು ವಾರ್ಷಿಕ ರಕ್ಷಣಾ ಮಾತುಕತೆಗಳು, ಜಂಟಿ ವ್ಯಾಯಾಮಗಳು, ಹೈಡ್ರೋಗ್ರಫಿ ವಿನಿಮಯಗಳು ಹಾಗೂ ಮಿಲನ್, ಗೋವಾ ಸಮುದ್ರ ಸಮ್ಮೇಳನ, ಗ್ಯಾಲೆ ಸಂವಾದ ಮುಂತಾದ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಭಾಗಿಯಾಗುತ್ತಿವೆ.
ಈ ಭೇಟಿ, ‘ಸಾಗರ ದೃಷ್ಟಿಕೋನ’ಕ್ಕೆ ಅನುಗುಣವಾಗಿ ಭಾರತ-ಶ್ರೀಲಂಕಾ ನೌಕಾ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿ ಹಿಂದೂ ಮಹಾಸಾಗರದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಬಲ ನೀಡಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa