ಬೈರುತ್, 22 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಲೆಬನಾನ್‌ನ ಬಿಂಟ್ ಜೆಬೈಲ್ ನಗರದಲ್ಲಿ ಭಾನುವಾರ ನಡೆದ ಇಸ್ರೇಲಿ ಡ್ರೋನ್ ದಾಳಿಯಲ್ಲಿ ಮೂವರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ. ಮೋಟಾರ್‌ಸೈಕಲ್ ಮತ್ತು ವಾಹನ ಗುರಿಯಾಗಿದ್ದ ಈ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಮೃತರಲ್ಲಿ ತಂದೆ ಹಾಗೂ ಮೂವರು ಮಕ್ಕಳು ಸೇರಿದ್ದಾರೆ, ತಾಯಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕುಟುಂಬ ಅಮೆರಿಕನ್ ನಾಗರಿಕರಾಗಿದ್ದಾರೆ. ದಾಳಿಯಲ್ಲಿ ಒಬ್ಬ ಹೆಜ್ಬೊಲ್ಲಾ ಸದಸ್ಯನೂ ಸಾವಿಗೀಡಾಗಿರುವುದಾಗಿ ಇಸ್ರೇಲಿ ಸೇನೆ ಘೋಷಿಸಿದೆ.
ಲೆಬನಾನ್ ಪ್ರಧಾನಿ ನವಾಫ್ ಸಲಾಮ್ ಈ ದಾಳಿಯನ್ನು “ನಾಗರಿಕರ ವಿರುದ್ಧದ ಘೋರ ಅಪರಾಧ” ಎಂದು ಖಂಡಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಅಮೆರಿಕ ಮಧ್ಯಸ್ಥಿಕೆಯಿಂದ ಒಪ್ಪಂದದ ಬಳಿಕ ಇಸ್ರೇಲ್-ಹೆಜ್ಬೊಲ್ಲಾ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುತ್ತಿರುವುದರ ಮಧ್ಯೆ ಈ ದಾಳಿ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa