ರಾಜ್ಯದಲ್ಲಿ ಇಂದಿನಿಂದ ಜಾತಿಗಣತಿ ಆರಂಭ
ಬೆಂಗಳೂರು, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಇಂದಿನಿಂದ ಕರ್ನಾಟಕದಾದ್ಯಂತ ಆರಂಭವಾಗುತ್ತಿದೆ. ಹಲವು ಸಮುದಾಯಗಳ ಅಸಮಾಧಾನ, ಆಕ್ಷೇಪ, ಆತಂಕ ನಡುವೆಯೂ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ 7 ಕೋಟಿ ಜನರ ಮನೆಯನ್ನು ಭೇಟಿ ಮಾಡಿ ಎಲ್ಲಾ ಮಾಹಿತ
Census


ಬೆಂಗಳೂರು, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಇಂದಿನಿಂದ ಕರ್ನಾಟಕದಾದ್ಯಂತ ಆರಂಭವಾಗುತ್ತಿದೆ. ಹಲವು ಸಮುದಾಯಗಳ ಅಸಮಾಧಾನ, ಆಕ್ಷೇಪ, ಆತಂಕ ನಡುವೆಯೂ ರಾಜ್ಯದ ಹಿಂದುಳಿದ ವರ್ಗಗಳ ಆಯೋಗ 7 ಕೋಟಿ ಜನರ ಮನೆಯನ್ನು ಭೇಟಿ ಮಾಡಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲು ಸಿದ್ಧವಾಗಿದೆ.

ಜಾತಿ ಗಣತಿಗೆ 1.75 ಲಕ್ಷ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ಅವರನ್ನು ಪೂರ್ವ ತಯಾರಿಗಳೊಂದಿಗೆ ತರಬೇತಿ ನೀಡಲಾಗಿದೆ. ಗಣತಿದಾರರು 60 ಪ್ರಶ್ನೆಗಳ ಮೂಲಕ ಎಲ್ಲಾ ಮಾಹಿತಿ ದಾಖಲಿಸಲಿದ್ದಾರೆ.

ಕ್ರಿಶ್ಚಿಯನ್ ಉಪಜಾತಿಗಳ ಹೆಸರನ್ನು ದಾಖಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ವಿವಿಧ ರಾಜಕೀಯ ಮತ್ತು ಆಡಳಿತಾತ್ಮಕ ಗೊಂದಲದ ಕಾರಣದಿಂದ 33 ಕ್ರಿಶ್ಚಿಯನ್ ಉಪಜಾತಿಗಳನ್ನು ಆಯೋಗ ಕೈಬಿಟ್ಟಿದೆ. ಆದಾಗ್ಯೂ, ಜನರಿಗೆ ತಾವು ಬಯಸಿದರೆ ತಮ್ಮ ಧರ್ಮ ಮತ್ತು ಜಾತಿ ವಿವರವನ್ನು ಸ್ವತಃ ನಮೂದಿಸಬಹುದಾಗಿದೆ.

ಬೆಂಗಳೂರು ನಗರದಲ್ಲಿ ತಯಾರಿ ಮತ್ತು ತರಬೇತಿಯ ತಡವಾದ ಕಾರಣ 2–3 ದಿನ ತಡವಾಗಿ ಸಮೀಕ್ಷೆ ಆರಂಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande