ಏಷ್ಯಾ ಕಪ್ 2025 : ಪಾಕಿಸ್ತಾನ ವಿರುದ್ದ ಭಾರತದ ದ್ವಿತೀಯ ಜಯ
ದುಬೈ, 22 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಏಷ್ಯಾ ಕಪ್ ಸೂಪರ್-4 ಹಂತದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಪಾಕಿಸ್ತಾನವನ್ನು ಸೋಲಿಸಿದೆ. ಭಾನುವಾರ ನಡೆದ ಪಂದ್ಯದಲ್ಲಿ ಭಾರತವು 172 ರನ್‌ಗಳ ಗುರಿಯನ್ನು 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು , 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು. ಅ
Cricket


ದುಬೈ, 22 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಏಷ್ಯಾ ಕಪ್ ಸೂಪರ್-4 ಹಂತದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿಗೆ ಪಾಕಿಸ್ತಾನವನ್ನು ಸೋಲಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಭಾರತವು 172 ರನ್‌ಗಳ ಗುರಿಯನ್ನು 18.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು , 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿತು.

ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಬಾರಿಸಿ ಪಂದ್ಯಶ್ರೇಷ್ಠರಾದರು. ಶುಭಮನ್ ಗಿಲ್ 47 ಮತ್ತು ತಿಲಕ್ ವರ್ಮಾ ಅಜೇಯ 30 ರನ್ ಗಳಿಸಿ ಜಯ ಖಚಿತಪಡಿಸಿದರು. ಪಾಕಿಸ್ತಾನ ಪರ ಸಾಹಿಬ್‌ಜಾದಾ ಫರ್ಹಾನ್ 58 ರನ್ ಗಳಿಸಿದರೆ, ಹ್ಯಾರಿಸ್ ರೌಫ್ 2 ವಿಕೆಟ್ ಪಡೆದರು.

ಭಾರತದ ಪರ ಶಿವಂ ದುಬೆ 2 ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು. ಈ ಜಯದೊಂದಿಗೆ ಟೀಮ್ ಇಂಡಿಯಾ ಫೈನಲ್ ಪ್ರವೇಶದತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande