ನವದೆಹಲಿ, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 5 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನವರಾತ್ರಿ ಆರಂಭಕ್ಕೆ ಒಂದು ದಿನ ಬಾಕಿ ಇರುವ ಸಂದರ್ಭದಲ್ಲಿ ಈ ಭಾಷಣ ನಡೆಯುತ್ತಿದೆ.
ನಾಳೆ (ಸೆಪ್ಟೆಂಬರ್ 22) ದೇಶಾದ್ಯಂತ ಹೊಸ ಜಿಎಸ್ಟಿ ದರಗಳು ಜಾರಿಗೆ ಬರಲಿವೆ. ಇತ್ತೀಚಿನ ಪರಿಷ್ಕರಣೆ ಪ್ರಕಾರ, ಸರ್ಕಾರವು ಹೆಚ್ಚಿನ ವಸ್ತುಗಳನ್ನು 5% ತೆರಿಗೆ ಶ್ರೇಣಿಯ ಅಡಿಯಲ್ಲಿ ತಂದು, 12% ಮತ್ತು 28% ದರಗಳನ್ನು ತೆಗೆದುಹಾಕಿದೆ. ಆದರೆ, ಕೆಲವು ಐಷಾರಾಮಿ ವಸ್ತುಗಳನ್ನು 40% ಜಿಎಸ್ಟಿ ವರ್ಗದಲ್ಲಿ ಇರಿಸಲಾಗಿದೆ.
ಪ್ರಧಾನಿ ಮೋದಿ ಅವರು ಹೊಸ ದರಗಳ ಅನುಷ್ಠಾನವು “ಪ್ರತಿ ಕುಟುಂಬದ ಉಳಿತಾಯವನ್ನು ಹೆಚ್ಚಿಸಿ, ದೇಶದ ಆರ್ಥಿಕತೆಗೆ ದ್ವಿಗುಣ ವೇಗ ನೀಡಲಿದೆ” ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa