ನವದೆಹಲಿ, 21 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 22, ಸೋಮವಾರ ಅಮೆರಿಕಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಈ ಭೇಟಿಯ ಉದ್ದೇಶ ಭಾರತ-ಅಮೆರಿಕಾ ವ್ಯಾಪಾರ ಮಾತುಕತೆಗಳನ್ನು ಮುಂದುವರೆಸಿ, ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವುದಾಗಿದೆ ಎಂದು ವಾಣಿಜ್ಯ ಸಚಿವಾಲಯ ಪ್ರಕಟಿಸಿದೆ.
ಗೋಯಲ್ ಅವರೊಂದಿಗೆ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳ ನಿಯೋಗ ಕೂಡ ಹಾಜರಾಗಲಿದೆ. ಅಮೆರಿಕದ ಪ್ರತಿನಿಧಿ ತಂಡದೊಂದಿಗೆ ನಡೆಯುವ ಮಾತುಕತೆಯಲ್ಲಿ ವ್ಯಾಪಾರ ಒಪ್ಪಂದದ ಪ್ರಮುಖ ಅಂಶಗಳನ್ನು ಚರ್ಚಿಸಲಾಗುವುದು.
ಗತ ಸೆಪ್ಟೆಂಬರ್ 16ರಂದು ಯುಎಸ್ ವ್ಯಾಪಾರ ಪ್ರತಿನಿಧಿ ಕಚೇರಿಯ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿ, ಪ್ರಾಥಮಿಕ ಚರ್ಚೆಗಳನ್ನು ನಡೆಸಿದ್ದರು. ಈಗಿನ ಮಾತುಕತೆಗಳು ಆ ಚರ್ಚೆಗಳ ಮುಂದುವರಿಕೆ ಭಾಗವಾಗಿದೆ.
ಈ ಭೇಟಿಯು ಅಮೆರಿಕವು ಎಚ್೧ಬಿ ವೀಸಾ ಶುಲ್ಕ ಹೆಚ್ಚಳ ಘೋಷಿಸಿರುವ ಸಂದರ್ಭದಲ್ಲಿ ನಡೆಯುತ್ತಿರುವುದು ವಿಶೇಷ ಗಮನ ಸೆಳೆಯುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa