ನವದೆಹಲಿ, 21 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಶಾಂತಿ ಆತ್ಮದಿಂದ ಬರುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಶಾಂತಿ ದಿನದಂದು ಹೇಳಿದ್ದಾರೆ.
ಭಾರತದ ವೈವಿಧ್ಯತೆ ಮತ್ತು ಸಂವಾದದ ಸಂಪ್ರದಾಯವು ಇಂದಿನ ತೊಂದರೆಗೀಡಾದ ಜಗತ್ತಿಗೆ ಭರವಸೆಯ ಕಿರಣವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಹಾತ್ಮ ಗಾಂಧಿಯವರ ಅಹಿಂಸೆಯ ಬೋಧನೆಗಳು ದ್ವೇಷ ಹಾಗೂ ಹಿಂಸೆಯನ್ನು ಕಡಿಮೆ ಮಾಡಲು ನೆರವಾಗುತ್ತವೆ ಎಂದು ಖರ್ಗೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸನಲ್ಲಿ ಬರೆದಿದ್ದಾರೆ.
ಯುದ್ಧ ಮತ್ತು ಅಸಮಾನತೆಯ ವಿರುದ್ಧ ಜನರು ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕರೆ ನೀಡಿದ ಅವರು, ಈ ಸಂದರ್ಭದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿದರು. ನೆಹರು ಅವರ ಮಾತುಗಳನ್ನು ಉಲ್ಲೇಖಿಸಿದ ಖರ್ಗೆ, “ಶಾಂತಿ ಎಂದರೆ ಆತ್ಮದಿಂದ ಬರುವ ಮನಸ್ಥಿತಿ” ಎಂದು ಹೇಳಿದರು.
ಈ ಕಲ್ಪನೆ ಈ ವರ್ಷದ ಶಾಂತಿ ದಿನದ ಧ್ಯೇಯವಾಕ್ಯವಾದ “ಶಾಂತಿಯುತ ಜಗತ್ತಿಗೆ ಕ್ರಮ ಕೈಗೊಳ್ಳಿ”ಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa