ಸ್ವದೇಶಿ ವಸ್ತುಗಳ ಖರೀದಿಗೆ ಪ್ರಧಾನಿ ಮೋದಿ ಕರೆ
ನವದೆಹಲಿ, 21 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಸ್ವದೇಶಿ ಚಳುವಳಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಇದೇ ಸ್ವದೇಶಿ ಮಂತ್ರದಿಂದ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೋಮವಾರದಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ ಆರಂಭವಾಗುತ್ತಿರುವ ಹಿನ್ನ
Pm


ನವದೆಹಲಿ, 21 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಸ್ವದೇಶಿ ಚಳುವಳಿಯಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು, ಇದೇ ಸ್ವದೇಶಿ ಮಂತ್ರದಿಂದ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರದಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು. “ನವರಾತ್ರಿ ಮೊದಲ ದಿನ ಸುರ್ಯೋದಯದ ಜೊತೆ ಹೊಸ ತಲೆಮಾರಿನ ಜಿಎಸ್‌ಟಿ ಜಾರಿಯಾಗುತ್ತಿದ್ದು, ಇದು ಆತ್ಮನಿರ್ಭರ ಭಾರತದತ್ತ ದೊಡ್ಡ ಹೆಜ್ಜೆ” ಎಂದರು.

ಪ್ರಧಾನಿ ಮೋದಿ, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ಆತ್ಮನಿರ್ಭರ ಭಾರತಕ್ಕೆ ಬಲ ನೀಡಬೇಕೆಂದು ಜನತೆಗೆ ಕರೆ ನೀಡಿದರು. “ಪ್ರತಿ ಮನೆಯೂ, ಪ್ರತಿ ಅಂಗಡಿಯೂ ಸ್ವದೇಶಿ ಪ್ರತೀಕವಾಗಬೇಕು” ಎಂದು ಅವರು ಒತ್ತಿ ಹೇಳಿದರು.

ಹೊಸ ಜಿಎಸ್‌ಟಿ ಪರಿಷ್ಕರಣೆಯಂತೆ 5% ಮತ್ತು 18% ಎಂಬ ಎರಡು ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಲಾಗಿದೆ. ಸುತ್ತಮುತ್ತ 99% ವಸ್ತುಗಳು 5% ತೆರಿಗೆಯ ಅಡಿಯಲ್ಲಿ ಬರುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಮನೆ, ವಾಹನ, ಎಲೆಕ್ಟ್ರಾನಿಕ್ ಉಪಕರಣಗಳು, ಪ್ರವಾಸ ಮುಂತಾದ ಖರ್ಚು ಕಡಿಮೆಯಾಗಲಿದೆ.

“ಈ ನಿರ್ಧಾರದಿಂದ ಬಡವರು, ಮಧ್ಯಮ ವರ್ಗ, ರೈತರು, ಮಹಿಳೆಯರು, ಉದ್ಯಮಿಗಳಿಗೆ ಲಾಭವಾಗಲಿದೆ. ನಾಗರಿಕ ದೇವೋ ಭವ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ. ಜನರಿಗೆ ಸರಾಸರಿ 2.5 ಲಕ್ಷ ರೂ. ಉಳಿತಾಯವಾಗಲಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande