ವಿಷ್ಣುವರ್ಧನ್ ಸ್ಮಾರಕದ ನೀಲನಕ್ಷೆ ಬಿಡುಗಡೆ
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕನ್ನಡ ಚಲನಚಿತ್ರರಂಗದ ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಸಮರ್ಪಣೆಯಾಗಿ ಅಭಿಮಾನಿಗಳು ನಿರ್ಮಿಸುತ್ತಿರುವ ನೂತನ ಸ್ಮಾರಕದ ನೀಲನಕ್ಷೆ ಬಿಡುಗಡೆಯಾಗಿದೆ. ವಿಷ್ಣುಸೇನೆ ಹಾಗೂ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ, ನಟ
Blue print


ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಚಲನಚಿತ್ರರಂಗದ ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗೆ ಸಮರ್ಪಣೆಯಾಗಿ ಅಭಿಮಾನಿಗಳು ನಿರ್ಮಿಸುತ್ತಿರುವ ನೂತನ ಸ್ಮಾರಕದ ನೀಲನಕ್ಷೆ ಬಿಡುಗಡೆಯಾಗಿದೆ.

ವಿಷ್ಣುಸೇನೆ ಹಾಗೂ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ, ನಟ ಸುದೀಪ್ ಸಹಭಾಗಿತ್ವದೊಂದಿಗೆ ಈ ಯೋಜನೆ ರೂಪುಗೊಂಡಿದೆ. ಕೆಂಗೇರಿ ಬಳಿಯ ಎರಡು ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಿಸಲಾಗುತ್ತಿದೆ. ಈ ಜಾಗವನ್ನು ಸುದೀಪ್ ಅವರ ಮುಂದಾಳತ್ವದಲ್ಲಿ ಖರೀದಿಸಿ ಒದಗಿಸಲಾಗಿದೆ.

ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾದ ಅಭಿಮಾನ್ ಸ್ಟುಡಿಯೋ ಸಮಾಧಿ ಗಲಾಟೆ ಬಳಿಕ ಪರ್ಯಾಯವಾಗಿ ಸ್ಮಾರಕ ನಿರ್ಮಾಣದ ಘೋಷಣೆ ಮಾಡಲಾಗಿತ್ತು. ಈಗ ಬಿಡುಗಡೆಯಾದ ನೀಲನಕ್ಷೆಯ ಪ್ರಕಾರ, ಸ್ಮಾರಕದಲ್ಲಿ ವಿಷ್ಣುವರ್ಧನ್ ಪ್ರತಿಮೆ, ಅವರ ಚಿತ್ರಗಳ ನೆನಪುಗಳು, ವೈಯಕ್ತಿಕ ವಸ್ತುಗಳ ಪ್ರದರ್ಶನ ಇರಲಿದ್ದು, ಅಭಿಮಾನಿಗಳಿಗೆ ದರ್ಶನಕ್ಕೆ ಸದಾ ಮುಕ್ತವಾಗಿರಲಿದೆ.

“ಡಾ. ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ” ಎಂಬ ಹೆಸರಿನಲ್ಲಿ ಈ ಸ್ಮಾರಕ ಗುರುತಿಸಲ್ಪಡಲಿದೆ. ಮುಂದಿನ ವರ್ಷ ವಿಷ್ಣುವರ್ಧನ್ ಅವರ ಜನ್ಮದಿನದೊಳಗಾಗಿ ಯೋಜನೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande