20 ಕೋಟಿ ಮೌಲ್ಯದ ಚಿನ್ನ, ಒಂದು ಕೋಟಿ ನಗದು ಕಳ್ಳತನ ; ಪ್ರಕರಣ ದಾಖಲು
ವಿಜಯಪುರ, 17 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಎಸ್‌.ಬಿ.ಐ ಫಾರ್ಮ್ ತುಂಬುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ, ಒಂದು ಕೋಟಿ ನಗದು ದರೋಡೆ ಮಾಡಲಾಗಿದೆ ಎಂದು ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಎಸ್‌.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಓರ
ಚಡಚಣ


ವಿಜಯಪುರ, 17 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಎಸ್‌.ಬಿ.ಐ ಫಾರ್ಮ್ ತುಂಬುವ ನೆಪದಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ, ಒಂದು ಕೋಟಿ ನಗದು ದರೋಡೆ ಮಾಡಲಾಗಿದೆ ಎಂದು ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಎಸ್‌.ಬಿ.ಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಓರ್ವ ಮೊದಲು ಕಣ್ಣಿಗೆ ಗ್ಲಾಸ್, ಕಪ್ಪು ಕೋವಿಡ್ ಮಾಸ್ಕ ಧರಿಸಿ ಬ್ರ್ಯಾಂಜ್ ಮ್ಯಾನೇಜರ್‌ಗೆ ಗನ್ ತೋರಿಸಿ ಜಲ್ದಿ ಲಾಕರ್ ಕೋಲೋ ಎಂದು ಬೆದರಿಸಿದ್ದಾನೆ. ಇದಾದ ಬಳಿಕ ಮತ್ತೇ ಇಬ್ಬರು ಬ್ಯಾಂಕ್‌ಗೆ ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರನ್ನು ಬಾತ್‌ರೂಮ್ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಉಳಿದಂತೆ ಮ್ಯಾನೇಜರ್, ಇನ್ನೊಬ್ಬನಿಗೆ ಲಾಕರ್ ಓಪನ್ ಮಾಡಲು ಹೇಳಿ 20 ಕೋಟಿ ಮೌಲ್ಯದ 20 ಕೆಜಿ ಚಿನ್ನ ಹಾಗೂ 1 ಕೋಟಿ ನಾಲ್ಕು ಲಕ್ಷ ನಗದು ದರೋಡೆ ಮಾಡಿಕೊಂಡು ಹೋಗಿದ್ದಾರೆ. ಅಲ್ಲದೇ, ಮೂವರು ಕಪ್ಪು ಬಣ್ಣ ಅಂಗಿಗಳನ್ನು ಧರಿಸಿದ್ದು, ಓರ್ವ ಮಾತ್ರ ತಲೆಗೆ ಬೀಳಿ ಬಣ್ಣದ ಟೋಪಿ ಹಾಕಿಕೊಂಡಿದ್ದಾನೆ. ಇನ್ನು ದರೋಡೆ ಮಾಡಿಕೊಂಡು ಹೋಗುವಾಗ ಹುಲಜಂತಿ ಬಳಿ ಬೈಕ್ ಸುಜೂಕಿ ಇವಿಎ ಪೇಕ್ ನಂಬರ ವಾಹನ ಡಿಕ್ಕಿಯಾಗಿದೆ.‌ ಈ ವೇಳೆ ಇಬ್ಬರು ಮಧ್ಯೆ ಗಲಾಟೆ ಆಗಿದ್ದು, ವಾಹನ ಬಿಟ್ಟು ಚಿನ್ನ, ನಗದು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಬ್ರ್ಯಾಂಜ್ ಮ್ಯಾನೇಜರ್ ತಾರಕೇಶ್ವರ ದೂರು ದಾಖಲು ಮಾಡಿದ್ದಾರೆ. ಈ ಬಗ್ಗೆ ಚಡಚಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande