ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರು ಕುಖ್ಯಾತ ನಕ್ಸಲರು ಹತ್ಯೆಯಾದ ಹಿನ್ನೆಲೆ, ಉತ್ತರ ಜಾರ್ಖಂಡ್‌ನ ಬೊಕಾರೊ ಪ್ರದೇಶದಿಂದ ನಕ್ಸಲಿಸಂ ಸಂಪೂರ್ಣವಾಗಿ ಅಂತ್ಯಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಶೀಘ್ರದಲ್ಲೇ ಇಡೀ ದೇಶವು ನಕ್ಸಲ್ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿಆರ್‌ಪಿಎಫ್‌ನ ಕೋಬ್ರಾ ದಳ ಹಾಗೂ ರಾಜ್ಯ ಪೊಲೀಸರು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 1 ಕೋಟಿ ರೂ. ಬಹುಮಾನ ಹೊಂದಿದ್ದ ನಕ್ಸಲ್ ಕಮಾಂಡರ್ ಸಹದೇವ್ ಸೊರೆನ್ ಅಲಿಯಾಸ್ ಪರ್ವೇಶ್ ಹತ್ಯೆಯಾದರು. ಜೊತೆಗೆ ನಕ್ಸಲರು ರಘುನಾಥ್ ಹೆಂಬ್ರಾಮ್ ಅಲಿಯಾಸ್ ಚಂಚಲ್ ಮತ್ತು ಬಿರ್ಸೆನ್ ಗಂಜು ಅಲಿಯಾಸ್ ರಾಮ್‌ಖೇಲವನ್ ಕೂಡ ಭದ್ರತಾ ಪಡೆಗಳ ಗುಂಡೇಟಿಗೆ ಬಲಿಯಾದರು.
ಈ ಯಶಸ್ವಿ ಕಾರ್ಯಾಚರಣೆ ಭದ್ರತಾ ಪಡೆಗಳ ಧೈರ್ಯ ಮತ್ತು ತಂತ್ರದ ಪ್ರತೀಕವಾಗಿದ್ದು, ಜಾರ್ಖಂಡ್ ಸೇರಿದಂತೆ ದೇಶದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa