ವಿಜಯಪುರ, 15 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮಾವಾ ಮಾರಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ಸಲಿಂ ಖುದಾನಸಾಬ ಪಡೇಕನೂರ, (48 ವರ್ಷ, ಉದ್ಯೋಗ: ಪಾನ್‌ಶಾಪ್ ವ್ಯಾಪಾರ, ಸಾ: ಮುದ್ದೇಬಿಹಾಳ) ರಮೇಶ ಗಣಪ್ಪ ಪೂಜಾರಿ (53 ವರ್ಷ, ಉದ್ಯೋಗ: ಪಾನ್‌ಶಾಪ್ ವ್ಯಾಪಾರ, ಸಾ: ಮುದ್ದೇಬಿಹಾಳ) ಇವರುಗಳಿಂದ ಮಾನವ ಸೇವನೆಗೆ ಹಾನಿಕಾರಕವಾದ ಅನಧೀಕೃತವಾಗಿ ತಯಾರಿಸಿದ1. 14 ಕೆಜಿ ಕಚ್ಚಾ ಮಾವಾ ಅಂದಾಜು ಮೌಲ್ಯ: 11,200, 5.175 ಕೆಜಿ ತಯಾರಿಸಿದ ಮಾವಾ (207 ಪ್ಯಾಕೇಟ್‌ಗಳು) ಅಂದಾಜು ಮೌಲ್ಯ: 6,210, ಅಡಿಕೆ ಚೂರು 12 ಕೆಜಿ ಅಂದಾಜು ಮೌಲ್ಯ: 3,600, ತಂಬಾಕು 5.8 ಕೆಜಿ ಅಂದಾಜು ಮೌಲ್ಯ: 5,800, ಸುಣ್ಣದ ಡಬ್ಬಿ 300 ಗ್ರಾಂ ಅಂದಾಜು ಮೌಲ್ಯ: 30, ಮಿಕ್ಸರ್ ಯಂತ್ರ – 1 ಅಂದಾಜು ಮೌಲ್ಯ: 500, ಡಿಜಿಟಲ್ ತೂಕದ ಯಂತ್ರ – 1 ಅಂದಾಜು ಮೌಲ್ಯ: 500 ಹೀಗೆ ಒಟ್ಟು ರೂ. 27,840/- ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ತಾಳಿಕೋಟಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಕೋಟಿ ಪಟ್ಟಣದ ಖತ್ರಿ ಬಜಾರ ಹತ್ತಿರ ಮಹಮ್ಮದರಸೂಲ್ ಮಹಿಬೂಬಸಾಬ ಮಮದಾಪೂರ (54 ವರ್ಷ, ಉದ್ಯೋಗ: ಪಾನ್‌ಶಾಪ್ ವ್ಯಾಪಾರ, ಸಾ: ಮಿಲ್ಲತ್‌ನಗರ ತಾಳಿಕೋಟಿ) ಇತನಿಂದ ಮಾನವ ಸೇವನೆಗೆ ಹಾನಿಕಾರಕವಾದ ಅನಧೀಕೃತವಾಗಿ ತಯಾರಿಸಿದ; 5.5 ಕೆಜಿ ತಯಾರಿಸಿದ ಮಾವಾ (220 ಪ್ಯಾಕೇಟ್‌ಗಳು) ಅಂದಾಜು ಮೌಲ್ಯ: 4,400, 45 ಕೆಜಿ ತಂಬಾಕು ಅಂದಾಜು ಮೌಲ್ಯ: 22,500, 31 ಕೆಜಿ ಅಡಿಕೆ ಚೂರು ಅಂದಾಜು ಮೌಲ್ಯ: 12,400, ನಗದು ಹಣ 12,328 ಹೀಗೆ ಒಟ್ಟು ರೂ. 51,628/- ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಸದರಿ ಎರಡು ಪ್ರಕರಣಗಳಲ್ಲಿ ಒಟ್ಟು 118.4 ಕೆಜಿ ಮಾವಾ ಹಾಗೂ ಮಾವಾ ತಯಾರಿಸಲು ಬಳಸುವ ಕಚ್ಚಾ ವಸ್ತುಗಳು ಸೇರಿ ಒಟ್ಟು 79,468/- ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸದರಿ ಕಾರ್ಯಾಚರಣೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande