ಅಣೆಕಟ್ಟು ನಿರ್ಮಾಣದಿಂದ ನೀರಿನ ಬಿಕ್ಕಟ್ಟಿಗೆ ಪರಿಹಾರವಿಲ್ಲ : ಸಿ.ಆರ್. ಪಾಟೀಲ್
ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ಅಣೆಕಟ್ಟುಗಳ ನಿರ್ಮಾಣದಲ್ಲಿ ಅಲ್ಲ, ಬದಲಾಗಿ ನೀರಿನ ಸಂರಕ್ಷಣೆ ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಲ್ಲಿ ಅಡಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹೇಳಿದ್ದಾರೆ. ''ಪಾ
Dam


ನವದೆಹಲಿ, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭಾರತದಲ್ಲಿ ನೀರಿನ ಬಿಕ್ಕಟ್ಟಿಗೆ ದೀರ್ಘಕಾಲೀನ ಪರಿಹಾರ ಅಣೆಕಟ್ಟುಗಳ ನಿರ್ಮಾಣದಲ್ಲಿ ಅಲ್ಲ, ಬದಲಾಗಿ ನೀರಿನ ಸಂರಕ್ಷಣೆ ಮತ್ತು ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯಲ್ಲಿ ಅಡಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹೇಳಿದ್ದಾರೆ.

'ಪಾಂಚಜನ್ಯ ಆಧಾರ್ ಇನ್ಫ್ರಾ ಸಂಗಮ 2025' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಸರಾಸರಿ 4,020 ಬಿಸಿಎಂ ಮಳೆ ನೀರು ಲಭ್ಯವಿರುವುದಾದರೂ ವಾರ್ಷಿಕ ನೀರಿನ ಅಗತ್ಯವು ಸುಮಾರು 1,220 ಬಿಸಿಎಂ ಆಗಿದೆ ಎಂದು ವಿವರಿಸಿದರು.

2047ರ ವೇಳೆಗೆ ಅಗತ್ಯ 1,180 ಬಿಸಿಎಂ ಆಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನೀರಿನ ಕೊಯ್ಲು, ಮರುಬಳಕೆ ಮತ್ತು ಸಾಂಪ್ರದಾಯಿಕ ಮೂಲಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಕೂಡ ಜಲ ಸಂರಕ್ಷಣೆ ಸರ್ಕಾರದ ಹೊಣೆಗಾರಿಕೆ ಮಾತ್ರವಲ್ಲ, ಇದು ಜನಸಾಮಾನ್ಯರ ಆಂದೋಲನವಾಗಬೇಕು ಎಂದು ಹೇಳಿದ್ದಾರೆ ಎಂದು ಪಾಟೀಲ್ ನೆನಪಿಸಿದರು.

ದೇಶದಲ್ಲಿ ಪ್ರಸ್ತುತ 56 ಸಾವಿರ ಅಣೆಕಟ್ಟುಗಳಿದ್ದರೂ ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯ ಕೇವಲ 750 ಬಿಸಿಎಂ. ನಿಜವಾದ ಅಗತ್ಯವನ್ನು ನೋಡಿದರೆ ಕನಿಷ್ಠ 450 ಬಿಸಿಎಂ ಹೆಚ್ಚುವರಿ ಸಾಮರ್ಥ್ಯ ಬೇಕಾಗಿದೆ. ಆದರೆ ಹೊಸ ಅಣೆಕಟ್ಟು ನಿರ್ಮಿಸಲು 25 ವರ್ಷಕ್ಕಿಂತ ಹೆಚ್ಚು ಕಾಲ ಮತ್ತು 25,000 ಕೋಟಿ ರೂ. ವೆಚ್ಚದ ಜೊತೆಗೆ ಭೂಸ್ವಾಧೀನ, ರೈತರ ಪ್ರತಿಭಟನೆ ಹಾಗೂ ಪರಿಸರ ಅಡೆತಡೆಗಳು ಸಮಸ್ಯೆ ಉಂಟುಮಾಡುತ್ತವೆ ಎಂದು ಹೇಳಿದರು.

ಅದಕ್ಕಾಗಿ ನೀರಿನ ಬಿಕ್ಕಟ್ಟಿಗೆ ಪರಿಹಾರವು ಅಣೆಕಟ್ಟುಗಳಲ್ಲ, ಬದಲಾಗಿ ನೀರಿನ ಸಂರಕ್ಷಣೆ, ಮರುಬಳಕೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲೇ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande