ಸಿನಿಮಾರಂಗಕ್ಕೆ ಮರಳಿದ ನಟಿ ಅಮೂಲ್ಯ
೮ ವರ್ಷದ ನಂತ್ರ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲು ಸಜ್ಜು
Amulya


ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಸಿನಿಮಾರಂಗದ ಗೋಲ್ಡನ್‌ಕ್ವೀನ್‌ ಎಂದು ಹೆಸರು ಪಡೆದುಕೊಂಡ ನಟಿ ಅಮೂಲ್ಯ ಚಿತ್ರರಂಗದಲ್ಲಿ ಕಾರ್ಯ ನಿರತವಾದಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಮತ್ತೆ ಸಿನಿಮಾ ಯಾವಾಗ ಮಾಡ್ತಾರೆ ಅನ್ನೋ ಪ್ರಶ್ನೆ ಆಗಾಗ ಕೇಳಿ ಬರ್ತಾನೇ ಇತ್ತು ..ಒಳ್ಳೆ ಸ್ಕ್ರಿಪ್ಟ್‌ಗಾಗಿ ಕಾದಿದ್ದ ಅಮೂಲ್ಯ ಸದ್ಯ ಒಂದೊಳ್ಳೆ ಕಥೆ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದ್ದಾರೆ.

ಎಂಟು ವರ್ಷದ ನಂತರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳು ಸಿದ್ದವಾಗಿರೋ ಅಮೂಲ್ಯ ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಅವರ ಹೊಸ ಕಥೆಗೆ ಸಹಿ ಹಾಕಿದ್ದಾರೆ.

ಅಮೂಲ್ಯ ಅವರ ಹುಟ್ಟುಹಬ್ಬದಂದೇ ಸಿನಿಮಾ ಅನೌನ್ಸ್‌ ಆಗಿದ್ದು ಸಣ್ಣದಾದ ಟೀಸರ್‌ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಸಿನಿಮಾತಂಡ ವೆಲ್ಕಂ ಮಾಡಿದೆ.. ಟೀಸರ್‌ ನೋಡಿದರೆ ಅಮೂಲ್ಯ ಕೂಡ ತಮ್ಮ ಕಮ್‌ ಬ್ಯಾಕ್‌ ಗಾಗಿ ಸಖತ್ತಾಗಿ ರೆಡಿಯಾಗಿದ್ದಾರೆ ಅನ್ನೋದು ತಿಳಿಯುತ್ತೆ ..ಈ ಟೀಸರ್‌ ಡ್ಯಾನ್ಸ್‌ ಮೂಮೆಂಟ್‌ ಅನ್ನು ವಿ ನಾಗೇಂದ್ರ ಕೊರಿಯೋಗ್ರಾಫ್‌ ಮಾಡಿದ್ದು ಫನ್ನಿ ಎನ್ನಿಸೋ ಮ್ಯೂಸಿಕ್‌ ಗೆ ಅಮೂಲ್ಯ ಸಿನಿಮಾ ಕ್ಯಾರೆಕ್ಟರ್‌ ಸ್ಟೈಲ್‌ ನಲ್ಲಿ ಸಿಂಗಲ್‌ ಟೇಕ್‌ ನಲ್ಲಿಯೇ ಸ್ಟೆಪ್ಸ್‌ ಹಾಕಿದ್ದಾರೆ.

ಮಂಜು ಸ್ವರಾಜ್‌ ನಿರ್ದೇಶನ ಮಾಡುತ್ತಿರೋ ಈ ಸಿನಿಮಾಗೆ “ಪೀಕಬೂ” ಎಂಡು ಹೆಸರಿಡಲಾಗಿದೆ.. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದವಾಗಿದೆ.. ಒಂದೊಳ್ಳೆ ಮೆಸೆಜ್‌ ಜೊತೆಗೆ ಕಮರ್ಷಿಯಲ್‌ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿ ಇರಲಿದೆ..ಸದ್ಯ ಸಿನಿಮಾಗೆ ಹೀರೋಯಿನ್‌ ಎಂಟ್ರಿಗಾಗಿ ಟೀಸರ್‌ ರಿಲೀಸ್‌ ಮಾಡಿರೋ ಸಿನಿಮಾತಂಡ ಸದ್ಯದಲ್ಲೇ ಶೂಟಿಂಗ್‌ ಕೂಡ ಶುರು ಮಾಡಲಿದ್ದಾರೆ….

ಇನ್ನು ಸಿನಿಮಾದಲ್ಲಿ ನಾಯಕಿಯಾಗಿ ಅಮೂಲ್ಯ ಅಭಿನಯ ಮಾಡ್ತಿದ್ದು ನಾಯಕ ಯಾರು ಅನ್ನೋದನ್ನ ಇನ್ನು ಸಿನಿಮಾ ಟೀಂ ರಿವಿಲ್‌ ಮಾಡಿಲ್ಲ…ಮಂಜು ಸ್ವರಾಜ್‌ ಆಕ್ಷನ್‌ ಕಟ್‌ ಚಿತ್ರಕ್ಕೆ ಇರಲಿದ್ದು, ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ . ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande