ಮುಂಬಯಿ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ ಬಾಂಗ್ಲಾದೇಶದ ನಿರಂಜನ್ ನಾಥ್ ಸುಬಲ್ (67) ಮತ್ತು ನೇಪಾಳದ ಕೃಷ್ಣ ಮಾರ್ಪನ್ ತಮಾಂಗ್ (29) ನಕಲಿ ಪಾಸ್‌ಪೋರ್ಟ್‌ಗಳೊಂದಿಗೆ ಸಿಕ್ಕಿಬಿದ್ದು ಬಂಧಿತರಾಗಿದ್ದಾರೆ.
ಇಬ್ಬರೂ ಕೋಲ್ಕತ್ತಾದಲ್ಲಿ ನಕಲಿ ದಾಖಲೆಗಳ ಆಧಾರದ ಮೇಲೆ ಭಾರತೀಯ ಪಾಸ್‌ಪೋರ್ಟ್ ಪಡೆದು, ಹಲವು ದೇಶಗಳಿಗೆ ಪ್ರಯಾಣಿಸಿದ್ದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣವನ್ನು ಸಹಾರ್ ಪೊಲೀಸ್ ಠಾಣೆ ತನಿಖೆ ನಡೆಸುತ್ತಿದೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa