ಹಾಲಭಾವಿ ಗ್ರಾಮದಲ್ಲಿ ಡೆಂಗೆ ಜ್ವರ ಇಲ್ಲ: ಡಿಎಚ್‌ಓ ಸ್ಪಷ್ಟನೆ
ಲಿಂಗಸೂಗುರು, 14 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೆಂದ್ರಬಾಬು ಅವರನ್ನೊಳಗೊಂಡ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನೊಳಗೊಂಡ ತಂಡವು ಲಿಂಗಸೂಗುರು ತಾಲೂಕಿನ ಹಾಲಭಾವಿ ಗ್ರಾಮಕ್ಕೆ ಭೇಟಿ ನೀಡಿ, ಶಂಕೀತ ಜ್ವರ ಪ್ರಕರಣಗಳ
ಹಾಲಭಾವಿ ಗ್ರಾಮದಲ್ಲಿ ಶಂಕಿತ ಡೆಂಗೆ ಜ್ವರ ಇಲ್ಲ: ಡಿಎಚ್‌ಓ ಸ್ಪಷ್ಟನೆ


ಹಾಲಭಾವಿ ಗ್ರಾಮದಲ್ಲಿ ಶಂಕಿತ ಡೆಂಗೆ ಜ್ವರ ಇಲ್ಲ: ಡಿಎಚ್‌ಓ ಸ್ಪಷ್ಟನೆ


ಹಾಲಭಾವಿ ಗ್ರಾಮದಲ್ಲಿ ಶಂಕಿತ ಡೆಂಗೆ ಜ್ವರ ಇಲ್ಲ: ಡಿಎಚ್‌ಓ ಸ್ಪಷ್ಟನೆ


ಲಿಂಗಸೂಗುರು, 14 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೆಂದ್ರಬಾಬು ಅವರನ್ನೊಳಗೊಂಡ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನೊಳಗೊಂಡ ತಂಡವು ಲಿಂಗಸೂಗುರು ತಾಲೂಕಿನ ಹಾಲಭಾವಿ ಗ್ರಾಮಕ್ಕೆ ಭೇಟಿ ನೀಡಿ, ಶಂಕೀತ ಜ್ವರ ಪ್ರಕರಣಗಳ ವರದಿಯ ಬಗ್ಗೆ ಪರಿಶೀಲಿಸಿತು.

ರಾಜ್ಯ ಸೇರಿದಂತೆ ರಾಯಚೂರು ಜಿಲ್ಲೆಯಲ್ಲಿ ಸತತ ಮಳೆಯಿಂದಾಗಿ ವಾತಾವರಣದಲ್ಲಿ ಬದಲಾವಣೆಯಾಗಿ ಜ್ವರ, ಕೆಮ್ಮು, ನೆಗಡಿ ಬರುವ ಸಾಧ್ಯತೆಯಿದ್ದು, ಯಾರು ಸಹ ಭಯ ಪಡದೇ ಗ್ರಾಮದಲ್ಲಿ ಆರಂಭಿಸಿರುವ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೆಂದ್ರಬಾಬು ಅವರು ಮನವಿ ಮಾಡಿದರು.

ಹಾಲಭಾವಿ ಗ್ರಾಮದಲ್ಲಿ ಡೆಂಗೆ ಉಲ್ಭಣವೆಂದು ಹಲವು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಸತ್ಯಕ್ಕೆ ದೂರವಾಗಿದೆ. ಈ ಗ್ರಾಮದಲ್ಲಿ ಯಾವುದೇ ಡೆಂಗೆ ಪ್ರಕರಣಗಳು ಕಂಡು ಬಂದಿಲ್ಲ. ಈ ಕುರಿತು ಪತ್ರಿಕೆಗಳಿಗೆ ಸ್ಪಷ್ಟೀಕರಣ ನೀಡಲಾಗಿದೆ. ಆದರೆ, ವೈರಲ್ ಜ್ವರ ಪ್ರಕರಣಗಳ ಹಿನ್ನಲೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು, ಸಾರ್ವಜನಿಕರು ತಮ್ಮ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ಅವರು ವೈದ್ಯಾಧಿಕಾರಿಗಳು ವಿನಂತಿಸಿದರು. ಗ್ರಾಮದಲ್ಲಿ ಜ್ವರ ಸಮೀಕ್ಷೆ ಕೈಗೊಂಡು ಜ್ವರ ಇರುವವರನ್ನು ತಕ್ಷಣವೇ ಚಿಕಿತ್ಸಾ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಗ್ರಾಮದಲ್ಲಿ ಮನೆ ಭೇಟಿ ಮಾಡಿ ಪರಿಶೀಲಿಸಿದಾಗ, ಜಿಲ್ಲೆಯಾದ್ಯಂತ ನಿರಂತರ ಮಳೆಯು ಆಗುತ್ತಿರುವ ಹಿನ್ನಲೆಯಲ್ಲಿ ವಾತಾವರಣದಲ್ಲಿ ಬದಲಾವಣೆಯುಂಟಾಗಿ ವೈರಲ್ ಜ್ವರ ಕಂಡು ಬರುವ ಸಾಧ್ಯತೆಯಿದ್ದು, ಮೂರು ದಿನಗಳಿಂದ ಐದು ದಿನಗಳವರೆಗೆ ಈ ವೈರಲ್ ಜ್ವರವಿರುತ್ತದೆ. ಈ ಜ್ವರದಿಂದ ಬಳಲುವವರಿಗೆ ಗ್ರಾಮದಲ್ಲಿಯೇ ವೈದ್ಯರಿಂದ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯಾರು ಭಯ ಪಡಬೇಡಿ ಎಂದು ಧೈರ್ಯ ತುಂಬಿದರು.

ಗ್ರಾಮಸ್ಥರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದ್ದಲ್ಲಿ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಆನೆಹೊಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಲು ಹಾಗೂ ಜ್ವರ ಪ್ರಕರಣ ಕಡಿಮೆಯಾಗುವರೆಗೆ ತುರ್ತು ಚಿಕಿತ್ಸಾ ಕೇಂದ್ರವನ್ನು ಹಾಗೂ ವೈದ್ಯಕೀಯ ತಂಡದ ಮನೆ ಭೇಟಿಯೊಂದಿಗೆ ಸಮೀಕ್ಷಾ ಕಾರ್ಯ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದರು.

ಮಳೆಯಿಂದ ಮನೆಯ ಸುತ್ತಲು ನೀರು ನಿಲ್ಲುವ ಸಾಧ್ಯತೆಯಿದ್ದು ಇಂತಹ ಸಂದರ್ಭಗಳಲ್ಲಿ ಡೆಂಗ್ಯು ಹರಡುವ ಈಡಿಸ್ ಸೊಳ್ಳೆಯು ಉತ್ಪತ್ತಿಯಾಗುತ್ತಿದ್ದು, ಒಂದು ವೇಳೆ ಸೋಂಕಿತ ಈಡಿಸ್ ಸೊಳ್ಳೆಯು ಕಚ್ಚಿದಲ್ಲಿ ಡೆಂಗೆ, ಚಿಕುನ್‌ಗುನ್ಯಾ ರೋಗಗಳು ಹರಡುವ, ಸತತ ಮಳೆಯಿಂದಾಗಿ ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದ ಜ್ವರ ಕಂಡುಬರುವ ಸಾಧ್ಯತೆಯಿದ್ದು, ಸಾರ್ವಜನಿಕರು ಭಯಪಡದೆ ಚಿಕಿತ್ಸೆ ಪಡೆಯಬೇಕು.

ನೀರು ಸಂಗ್ರಹಕಗಳನ್ನು ವಾರದಲ್ಲಿ ಒಮ್ಮೆ ಖಾಲಿ ಮಾಡಿ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಹಾಕಬೇಕು. ಮಲಗುವಾಗ ಸೊಳ್ಳೆ ಪರದೆಗಳ ಬಳಕೆಗೆ ಆಧ್ಯತೆ ನೀಡಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಗೆ ಬಂದಾಗ ನೀಡುವ ಸಲಹೆಗಳನ್ನು ಅನುಸರಿಸಬೇಕು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande