ಜೈಪುರ, 14 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ರಾಜಸ್ಥಾನದ ಜೈಪುರದ ಪ್ರಹ್ಲಾದಪುರ ಬಳಿಯ ರಿಂಗ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹರಿದ್ವಾರದಲ್ಲಿ ಚಿತಾಭಸ್ಮ ವಿಸರ್ಜನೆ ಮಾಡಿ ಹಿಂದಿರುಗುತ್ತಿದ್ದ ಕುಟುಂಬದ ಕಾರು ನಿಯಂತ್ರಣ ತಪ್ಪಿ 16 ಅಡಿ ಆಳದ ನೀರು ತುಂಬಿದ ಚರಂಡಿಗೆ ಬಿದ್ದು, ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಲ್ಲಿ ರಾಮರಾಜ್ ವೈಷ್ಣವ್, ಪತ್ನಿ ಮಧು, ಮಗ ರುದ್ರ, ಕಲುರಾಮ್, ಪತ್ನಿ ಸೀಮಾ, ಮಗ ರೋಹಿತ್ ಹಾಗೂ ಗಜರಾಜ್ ಸೇರಿದ್ದಾರೆ. ದಕ್ಷಿಣ ಡಿಸಿಪಿ ರಾಜರ್ಷಿ ರಾಜ್ ವರ್ಮಾ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರನ್ನು ಹೊರತೆಗೆಯುವ ಕಾರ್ಯ ನಡೆಸಿ ಶವಗಳನ್ನು ಶವಾಗಾರಕ್ಕೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa